ದ್ವೇಷ, ಸುಳ್ಳಿನ ವಿರುದ್ಧ ಕಾನೂನು ತರುವುದಕ್ಕೂ ಮುನ್ನ ಸರ್ಕಾರ ಸಮಗ್ರವಾದ ಚರ್ಚೆ ನಡೆಸಲಿ: ಶಿವಸುಂದರ್

Date:

Advertisements

ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ದ್ವೇಷ, ಸುಳ್ಳು ಸುದ್ದಿಗಳ ಪ್ರಚಾರದ ವಿರುದ್ಧ ಕಾನೂನು ತರಲು ಸರ್ಕಾರ ಹೊರಟಿರುವುದು ಒಳ್ಳೆಯ ಸಂಗತಿಯೇ. ಆದರೆ, ಕಾನೂನು ತರುವುದಕ್ಕೂ ಮುನ್ನ ಸರ್ಕಾರವು ಸಮಗ್ರವಾದ ಸಾರ್ವಜನಿಕ ಚರ್ಚೆ ನಡೆಸಲು ಕೂಡ ಮುಂದಾಗಬೇಕು ಎಂದು ಖ್ಯಾತ ಸಾಮಾಜಿಕ ಚಿಂತಕರಾದ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್, ‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ಹಾಗೂ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ’ಯ ಬಗ್ಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ಸೋಷಿಯಲ್ ಮೀಡಿಯಾದ ಇಂದಿನ ಕಾಲಘಟ್ಟದಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿ ಸಿಕ್ಕಾಪಟ್ಟೆ ನಡೆಯುತ್ತಲೇ ಇದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ವಿಪರೀತ ಏರಿಕೆಯಾಗಿದೆ. ನಿನ್ನೆ ಸಂಸತ್‌ನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೆಲ್ಲವೂ ಸುಳ್ಳು. ಮಾಲೇಗಾಂವ್ ಸ್ಫೋಟ ಪ್ರಕರಣದ ತೀರ್ಪು ಬರುತ್ತದೆ ಎಂದೇ ಮೊದಲೇ ಗೊತ್ತಿದ್ದರಿಂದಲೇ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ‘ಹಿಂದುತ್ವ ಟೆರರಿಸಂ ಅನ್ನೋದೇ ಇಲ್ಲ’ ಎಂದು ಮಾತನಾಡಿದ್ದೆಲ್ಲವೂ ದ್ವೇಷ ಭಾಷಣ. ಹಾಗಾಗಿ, ದ್ವೇಷ, ಸುಳ್ಳು ಮಾಹಿತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತಿದೆ ಎಂಬುದನ್ನು ಕೂಡ ನಾವು ಸದಾ ಗಮನಿಸುತ್ತಿರಬೇಕು” ಎಂದು ಸಲಹೆ ನೀಡಿದರು.

Advertisements

ಸುಳ್ಳು, ದ್ವೇಷಗಳನ್ನು ಕಾನೂನು ತರುವ ಮೂಲಕ ತಡೆಗಟ್ಟಬಹುದು ಎಂಬುದು ಒಂದು ಕ್ರಮವಷ್ಟೇ. ಅದರಿಂದಲೇ ಎಲ್ಲ ಬದಲಾವಣೆಗಳು ಬರುತ್ತದೆ ಅಂತ ನಂಬಿ ಕೂರುವುದು ಸರಿಯಲ್ಲ. ಸುಳ್ಳು ಸುದ್ದಿ, ದ್ವೇಷ ಭಾಷಣಗಳಿಂದ ಸಮಾಜದಲ್ಲಿ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ನಾವು ಅರಿವು ಮೂಡಿಸಬೇಕಿದೆ. ಅದಕ್ಕಾಗಿ ಕೇವಲ ಕಾನೂನು, ಕಾಯ್ದೆಗಳು ಸಾಕಾಗುವುದಿಲ್ಲ. ಜನರ ತಲೆಯಲ್ಲಿ ತುಂಬಿಕೊಂಡಿರುವ ದ್ವೇಷವನ್ನು ಹೋಗಲಾಡಿಸಲು ಪ್ರಜ್ಞಾವಂತ ನಾಗರಿಕರು, ಸಂಘಟನೆಗಳು ಆಂದೋಲನವನ್ನು ರೂಪಿಸುವ ಅಗತ್ಯವಿದೆ. ಜನರ ನಡುವೆ ಸೇತುವೆ ಕಟ್ಟುವ ಅಗತ್ಯವಿದೆ ಎಂದು ಶಿವಸುಂದರ್ ತಿಳಿಸಿದರು.

vinay 2

ನಮಗೆ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್ ಅವರು ಬರೆದಿರುವ ರೆವೆಲ್ಯೂಷನ್ & ಕೌಂಟರ್ ರೆವೆಲ್ಯೂಷನ್ ಅನ್ನು ಓದಿದರೆ ಮಹಾಭಾರತ, ರಾಮಾಯಣ ಸೇರಿದಂತೆ ಕೆಲವೊಂದು ಶಾಸ್ತ್ರಗಳು ಹರಡಿರುವ ದ್ವೇಷಗಳು ಬೇರೊಂದಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು. ದಲಿತರು, ಮಹಿಳೆಯರು, ಶೂದ್ರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಲ್ಲದೇ, ನಾಗರಿಕರೇ ಅಲ್ಲ ಎಂಬುದನ್ನು ಹೇಳಿರುವುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರಾದ ವಿನಯ್ ಶ್ರೀನಿವಾಸ್, “ಫೇಕ್ ನ್ಯೂಸ್ ಹಾಗೂ ದ್ವೇಷ ಹರಡುವುದು ಇವತ್ತು ಸಾಮಾಜಿಕ ಪಿಡುಗುಗಳಾಗಿ ಪರಿಣಮಿಸಿದೆ. ಸರ್ಕಾರ ದ್ವೇಷ, ಸುಳ್ಳು ಸುದ್ದಿಗಳ ಪ್ರಚಾರದ ವಿರುದ್ಧ ಕಾನೂನು ತರಲು ಸರ್ಕಾರ ಹೊರಟಿರುವುದು ಉತ್ತಮವೇ. ಆದರೆ, ಈಗ ಹರಿದಾಡಿರುವ ಕರಡು ಪ್ರತಿ ಸರ್ಕಾರದ ಅಧಿಕೃತ ಕರಡು ಎಂಬ ಬಗ್ಗೆಯೂ ಅನುಮಾನಗಳಿವೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಸರ್ಕಾರ ಕಾನೂನನ್ನು ತರಬೇಕಿದೆ. ಇದಕ್ಕೆ ಜನರ ಅಭಿಪ್ರಾಯವನ್ನೂ ಕೇಳಬೇಕು” ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮಾನವಿ ಅತ್ರಿ ದ್ವೇಷ ಭಾಷಣಗಳ ಬಗ್ಗೆ ಮಾತನಾಡಿ, ಈಗಾಗಲೇ ಹೊರಬಂದಿರುವ ಕರಡು ಮಸೂದೆಯಲ್ಲಿ ಹಲವಾರು ತಪ್ಪುಗಳು ಕಂಡುಬಂದಿದೆ. ಪೊಲೀಸರಿಗೆ ಇದರಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಅಧಿಕಾರ ನೀಡಿರುವುದು ಕಾಣಬಹುದು. ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಈಗಾಗಲೇ ದೇಶದಲ್ಲಿರುವ ಕಾನೂನನ್ನು ಬಳಸಿಕೊಳ್ಳಬಹುದು. ತಹಸೀನ್ ಪೂನಾವಾಲಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಅದನ್ನು ಕೂಡ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.

ಹಹ

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ ಮಾತನಾಡುತ್ತಾ, ದ್ವೇಷ ಭಾಷಣಗಳ ಹಾವಳಿ ಹೆಚ್ಚಾಗಿದೆ. ಇದರಲ್ಲಿ ಬಿಜೆಪಿ-ಸಂಘಪರಿವಾರದವರೇ ಮುಂಚೂಣಿಯಲ್ಲಿದ್ದಾರೆ. ದ್ವೇಷ ಭಾಷಣ ಮಾಡುವವರಿಗೆ ಮಾಧ್ಯಮಗಳು ಕೂಡ ಸಾಥ್ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ‘ತಬ್ಲೀಗ್ ವೈರಸ್’ ಎನ್ನುವ ಮೂಲಕ ವ್ಯವಸ್ಥಿತವಾಗಿ ದ್ವೇಷ ಹಂಚಲಾಗಿತ್ತು. ಕರಾವಳಿಯಲ್ಲಿ ಕೆಲವು ತಿಂಗಳುಗಳ ಹಿಂದೆ ನಡೆದ ಹಿಂಸಾತ್ಮಕ ಕೊಲೆಗಳಿಗೆ ದ್ವೇಷ ಭಾಷಣವೂ ಕಾರಣ. ಇದನ್ನು ಮಟ್ಟ ಹಾಕಬೇಕಾದರೆ ಹಿರಿಯ ನಿವೃತ್ತ ನ್ಯಾಯಾಧೀಶರು, ಐಪಿಎಸ್ ಅಧಿಕಾರಿಗಳ ವಿಚಕ್ಷಣಾ ದಳವೂ ಕೂಡ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನಾಭಿಪ್ರಾಯವನ್ನೂ ಸಂಗ್ರಹಿಸಬೇಕಿದೆ. ಆಗ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

ಕಕ

ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ, “ನಮ್ಮ ದೇಶದಲ್ಲಿ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದ ಜನರ ನಡುವೆ ಧರ್ಮ, ಜಾತಿಯನ್ನು ತಂದು ದ್ವೇಷ ಹಂಚಲಾಗುತ್ತಿದೆ. ಅದರಲ್ಲಿ ಸೋಷಿಯಲ್ ಮೀಡಿಯಾಗಳಲ್ಲಂತೂ ವಿಪರೀತವಾಗಿದೆ. ಅಲ್ಪಸಂಖ್ಯಾತರು, ದಲಿತರು ಇದರ ಬಲಿಪಶುಗಳಾಗಿದ್ದಾರೆ. ಇವುಗಳ ವಿರುದ್ಧ ಕಾನೂನು ತರುವುದು ಒಂದು ಭಾಗವಾದರೂ, ಜನರ ಮನಸ್ಸನ್ನು ಒಗ್ಗೂಡಿಸುವುದು ಪ್ರಮುಖವಾಗಿದೆ. ಪ್ರೀತಿ, ವಿಶ್ವಾಸ ತುಂಬಿದಲ್ಲಿ ದ್ವೇಷಕ್ಕೆ ಅವಕಾಶ ಸಿಗುವುದಿಲ್ಲ. ಜನರ ನಡುವೆ ಪ್ರೀತಿಯ ಸೇತುವೆ ನಿರ್ಮಾಣ ಆಗಬೇಕು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಧರ್ಮಸ್ಥಳ | ಪೊಲೀಸರಿಂದ 15 ವರ್ಷಗಳ ಅಸ್ವಾಭಾವಿಕ ಸಾವುಗಳ ದಾಖಲೆ ನಾಶ!

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಆದಿ ಅಲ್ ಹಸನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಉಪಸ್ಥಿತರಿದ್ದರು. ಇದೇ ವೇಳೆ ಸಭೆಯಲ್ಲಿ ಸಂವಾದ ಕೂಡ ನಡೆಸಲಾಯಿತು. ಮುಹಮ್ಮದ್ ಪೀರ್ ಲಟಗೇರಿ ನಿರೂಪಿಸಿದರು. ರಿಯಾಝ್ ಕೊಪ್ಪಳ ಸಹಕರಿಸಿದರು.

ಕಕಕಕ
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X