ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಿ.ಎಸ್.ಪುರ ಹೋಬಳಿ ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ನಿರ್ದೇಶಕರಾಗಿ ಉಂಗ್ರದ ಲಕ್ಷ್ಮೀ ರವಿ ಅವರು ಅವಿರೋಧ ಆಯ್ಕೆಯಾದರು.
ನೂತನ ನಿರ್ದೇಶಕಿ ಲಕ್ಷ್ಮೀ ರವಿ ಅವರು ಸುದ್ದಿಗಾರರ ಜೊತೆ ಮಾತನಾಡಿ ಕೃಷಿಕರ ಪರ ಕೆಲಸ ಮಾಡುವ ಪಿಎಲ್ ಡಿ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಜೊತೆ ಶ್ರಮಿಸುತ್ತೇವೆ. ಅವಿರೋಧ ಆಯ್ಕೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಈ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಬ್ಯಾಂಕ್ ಬೆಳೆಸುವ ಕೆಲಸ ಮಾಡುತ್ತೇವೆ ಎಂದರು.