ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 39ನೇ ಪುಣ್ಯ ಸ್ಮರಣೆಯನ್ನು ಹಾಸನ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಾಡಲಾಯಿತು.
ನಗರದ ವಿವೇಕ ನಗರದಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, “ಸರ್ವ ವರ್ಗದ ಅಭಿವದ್ಧಿಗೆ ಅಂಬೇಡ್ಕರ್ ಅವರಂತೆ ಶ್ರಮಿಸಿದ ಡಾ.ಬಾಬು ಜಗ ಜೀವನರಾಂ ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದವರ, ಶ್ರಮಿಕರ ಹಾಗೂ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಸಮಾಜದಲ್ಲಿರುವ ಎಲ್ಲಾ ಜಾತಿಯ ಬಡವರ ಉದ್ದಾರವಾಗುವವರೆಗೆ ದೇಶದ ಅಭಿವದ್ಧಿ ಸಾಧ್ಯವಿಲ್ಲ. ದೇಶದ ರೈತರು ಆಧುನಿಕ ಬೇಸಾಯ ಪದ್ದತಿ ಅಳವಡಿಸಿ ಕೊಳ್ಳುವವರೆಗೆ ದೇಶದಲ್ಲಿ ರೈತರ ಅಭಿವೃದ್ಧಿಯಾಗಲ್ಲ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಜಗ ಜೀವನರಾಂ ಅವರು ದೇಶದ ಕೃಷಿ ಸಚಿವರಾಗಿ ಕ್ರಾಂತಿಯನ್ನೇ ಸೃಷ್ಟಿಸಿದ ವ್ಯಕ್ತಿ. ಇವರ ಅವಧಿಯಲ್ಲಿ ಆಧುನಿಕ ಬೇಸಾಯ ಪದ್ದತಿ ಅಳವಡಿಸ ಲಾಯಿತು. ದೇಶದಲ್ಲಿ ಆಹಾರದ ಉತ್ಪಾದನೆ ಅಧಿಕಗೊಂಡು ಕೃಷಿ ಉತ್ಪನ್ನಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ವಿದೇಶಗಳಿಗೆ ರಫ್ತು ಮಾಡುವಷ್ಟು ಅಭಿವೃದ್ಧಿ ಕಂಡಿತು ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸುವಂತಾಗಬೇಕು” ಎಂದರು.
ಇದನ್ನೂ ಓದಿ: ಹಾಸನ | ತಹಶೀಲ್ದಾರ್‌ಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವಂತೆ ಡಿಸಿ ಸೂಚನೆ
ಈ ವೇಳೆ ಸಂಘದ ಕಾರ್ಯದರ್ಶಿ ಸೋಮಶೇಖರ್, ಸದಸ್ಯರುಗಳಾದ ರಾಜು. ಬಿ.ಹೆಚ್, ತೀರ್ಥಪ್ರಸಾದ್, ಧರ್ಮ, ಖಜಾಂಜಿ ರಂಗರಾಜು, ಚಂದಶೇಖರ್, ಗೌತಮ್, ಹನುಮಂತರಾಜು, ವೆಂಕಟೇಶ್, ಮರಿಸ್ವಾಮಿ ಸೇರಿದಂತೆ ಮಹಿಳಾ ಸದಸ್ಯರುಗಳಾದ ತೀರ್ಥಮಣಿ, ಚಂದ್ರಾವತಿ, ಭಾಗ್ಯ ಚಂದ್ರು, ಭಾಗ್ಯ ಬಸವರಾಜು, ಜೋತಿ, ಪಾರ್ವತಿ ಉಪಸ್ಥಿತರಿದ್ದರು.