ಹಾಸನ | ಸಿಪಿಐಎಂ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಭಾರತ ಉಳಿಸುವಂತೆ ಮತದಾರರಲ್ಲಿ ಮನವಿ

Date:

Advertisements

ಕಡುಭ್ರಷ್ಟ ಮತ್ತು ಕೋಮುವಾದಿ ಬಿಜೆಪಿ ಮತ್ತದರ ಮಿತ್ರ ಪಕ್ಷಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸುವ ಮೂಲಕ ಭಾರತವನ್ನು ಉಳಿಸುವಂತೆ ಸಿಪಿಐಎಂ ಮತದಾರರಲ್ಲಿ ಮನವಿ ಮಾಡಿದೆ.

ಏ.22ರಂದು ಭಾರತ ಕಮ್ಯುನಿಸ್ಟ್ ಪಕ್ಷ  ಮಾರ್ಕ್ಸ್‌ವಾದಿ (ಸಿಪಿಎಂ) 18 ನೇ ಲೋಕಸಭೆ ಚುನಾವಣೆಗಾಗಿ ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯನ್ನು ಹಾಸನದ ಸಿಪಿಎಂ ಕಚೇರಿ ಶ್ರಮದಲ್ಲಿ ಬಡುಗಡೆಗೊಳಿಸಿತು.

ಈ ವೇಳೆ ಮಾತನಾಡಿದ ಸಿಪಿಎಂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರ್ಮೇಶ್, ದೇಶ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಕೇಂದ್ರದ ಎನ್‌ಡಿಎ ಸರ್ಕಾರವೇ ಕಾರಣವಾಗಿದೆ. ನಿರುದ್ಯೋಗ ಹೆಚ್ಚಳ, ಹಸಿವಿನ ಸೂಚ್ಯಂಕದಲ್ಲಿ ಹೆಚ್ಚಳ, ಬಡತನ, ಹವಾಮಾನ ವೈಪರೀತ್ಯಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕೇಂದ್ರದ ಎನ್‌ಡಿಎ ಸರ್ಕಾರವೇ ಕಾರಣ. ಅದಕ್ಕೆ ಪರ್ಯಾಯ ಪರಿಹಾರ ಸಿಪಿಎಂ ಪ್ರಣಾಳಿಕೆಯಲ್ಲಿದೆ ಎಂದರು.

Advertisements

ಭಾರತ ಸಂವಿಧಾನದ ಮತನಿರಪೇಕ್ಷ ನೀತಿ ಮತ್ತು ಒಕ್ಕೂಟ ತತ್ವಗಳ ಸಾಂವಿಧಾನಿಕ ಮೌಲ್ಯವನ್ನು ಎನ್‌ಡಿಎ ಸರ್ಕಾರ ಗಾಳಿಗೆ ತೂರಿದೆ. ಈ 18ನೇ ಲೋಕಸಭಾ ಚುನಾವಣೆಯು ಭಾರತದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ ಚುನಾವಣೆ. ಇದುವರೆಗೆ ದೇಶದಲ್ಲಿ ಪಕ್ಷ ಮತ್ತು ಪಕ್ಷಗಳ ಒಕ್ಕೂಟದ ಆಧಾರದ ಮೇಲೆ ನಡೆಯುತ್ತಿತ್ತು. ಈಗ ಕೇವಲ ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ನಡೆಯುತ್ತದೆ ಎಂದರು.

ನೀತಿ, ಅಭಿವೃದ್ಧಿ, ದೇಶದ ಭವಿಷ್ಯದ ದೃಷ್ಟಿಕೋನದ ಮೇಲೆ ನಡೆಯಬೇಕಿದ್ದ ಚುನಾವಣೆ, ಈಗ ಏಕವ್ಯಕ್ತಿ ಹೆಸರಿನ ಮೇಲೆ ಮತ ಹಾಕುವಂತೆ ಜಾಹೀರಾತುಗಳನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದಲ್ಲಿ ಚುನಾವಣೆಯು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ನಡೆಯಬೇಕೋ ಅಥವಾ  ಏಕವ್ಯಕ್ತಿ ಮತದಾನದ ಆಧಾರದಲ್ಲಿ ನಡೆಯಬೇಕೋ ಎಂದು ಇದೀಗ ನಿರ್ಧರಿಸಲೇಬೇಕಿದೆ. ಕಳೆದ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರವು ಸ್ವಾತಂತ್ರ್ಯ ಹೋರಾಟ ಸಂವಿಧಾನ ಮೌಲ್ಯಗಳನ್ನು ಹಿಂದಕ್ಕೆ ಸರಿಸಿ ಬಂಡವಾಳಶಾಹಿ ಸ್ವಾಯತ್ತತೆ ಮತ್ತು  ಏಕಧರ್ಮದ ಪಾಳೇಗಾರಿಕೆ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ಸ್ವತಃ ಪ್ರಧಾನಿಯವರೇ ಪ್ರಧಾನ ಅರ್ಚಕನಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಉದಾಹರಣೆಗೆ ನೂತನ ಸಂಸತ್ ಭವನ ಮತ್ತು ರಾಮಮಂದಿರ ಉದ್ಘಾಟನೆ ಮತ್ತಿತರರ ಕಾರ್ಯಕ್ರಮಗಳನ್ನು ನಡಸಿದ್ದನ್ನು ಕಾಣಬಹುದು ಎಂದರು.

ದೇಶದ ಭವಿಷ್ಯ ನಿರ್ಧರಿಸುವ ಹಲವು ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆ ಇಲ್ಲದೆ ಅಥವಾ ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಮಾಡಿ ಮಸೂದೆಗಳಿಗೆ ಅನುಮೋದನೆ ತೆಗೆದುಕೊಳ್ಳಲಾಗಿದೆ. ಹಾಗಾಗಿ  ಸಂಸತ್ತಿನಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಹೆಚ್ಚಬೇಕು. ಹಾಗಾಗಿ ಜನತೆ ಸಿಪಿಎಂ ಸ್ಪರ್ಧಿಸಿರುವ ಕಡೆಗಳಲ್ಲಿ ಸಿಪಿಎಂ ಅಭ್ಯರ್ಥಿ ಗಳಿಗೆ ಮತ ಹಾಕಬೇಕು. ಇಲ್ಲದಿರುವ ಕಡೆ ಬಿಜೆಪಿ ಮತ್ತದರ ಮಿತ್ರ ಪಕ್ಷಗಳನ್ನು ಸೋಲಿಸುವ ಶಕ್ತಿಗಳಿಗೆ ಮತ ನೀಡಬೇಕು. ಆ ಮೂಲಕ ಪ್ರಜಾಸತ್ತಾತ್ಮಕ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ದುಡಿಯುವ ಜನರ, ದಲಿತರ, ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವ ಶಕ್ತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಭ್ರಷ್ಟ ಬಿಜೆಪಿ, ಅವಕಾಶವಾದಿ ಜೆಡಿಎಸ್  ಸೋಲಿಸಿ

ಹಾಸನವನ್ನು ಕೋಮುವಾದಿ ರಾಜಕಾರಣದ ಪ್ರಯೋಗಶಾಲೆಯನ್ನಾಗಿಸಲು ನೆರವು ನೀಡುತ್ತಿರುವ ಜೆಡಿಎಸ್ ಇಷ್ಟು ದಿನಗಳ ಕಾಲ ಅವಕಾಶ ನೀಡಿದ ಹಾಸನಕ್ಕೆ ದ್ರೋಹ ಬಗೆದಿದೆ. ಇಲ್ಲಿನ ಸಂಸದರು ಕಳೆದ 5 ವರ್ಷಗಳ ಅವಧಿಯಲ್ಲಿ  ಯಾವ ಸಾಧನೆಯನ್ನೂ ಮಾಡಲಿಲ್ಲ. ತಾತ ಪ್ರಧಾನಿಯಾಗಿ, ಲೋಕಸಭಾ ಸದಸ್ಯರಾಗಿ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ತಂದೆ ಮಾಜಿ ಸಚಿವರಾಗಿದ್ದಾರೆ. ಇಂತಹ ಅವಕಾಶಗಳನ್ನು ಬಳಸಿಕೊಂಡು ಹಾಸನವನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಬಹುದಿತ್ತು ಎಂದರು.

ಇಂತಹ ಅವಕಾಶವನ್ನು ಬಳಸಿಕೊಳ್ಳದೆ ಜನಸಂಪರ್ಕವನ್ನೇ ಕಳೆದುಕೊಂಡಿದ್ದ  ಸಂಸದರು ದಿಶಾ ಸಭೆ ನಡೆಸಿದ್ದೇ ಸಾಧನೆ. ಐಷಾರಾಮಿ ಜೀವನ, ದುರಹಂಕಾರದ ವ್ಯಕ್ತಿತ್ವದಿಂದಾಗಿ ಅವಕಾಶವನ್ನು ಹಾಳುಗೆಡವಿ ಈಗ ತಪ್ಪಾಗಿದ್ದರೆ ತಿದ್ಕೋಳ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆಯಕಟ್ಟಿನ ಅವಕಾಶವಿರುವ ಜಿಲ್ಲೆಯಲ್ಲಿ ಲಭ್ಯವಿರುವ ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಂಡು ಉದ್ಯೋಗ ಸೃಷ್ಟಿಸಿ ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸುವ ದೂರದೃಷ್ಟಿ ಇಲ್ಲದೆ ಜಿಲ್ಲೆಯನ್ನು  ಹಿಂದುಳಿಯಲು ಕಾರಣವಾದರು ಎಂದು ಟೀಕಿಸಿದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಪಕ್ಷಕ್ಕೆ ಜನತೆ ನೀಡುವ ಶಕ್ತಿ ಆಧಾರದಲ್ಲಿ ಸಂಸತ್ತಿನ ಒಳಗೆ ಜನವಿರೋಧಿ ನೀತಿಗಳನ್ನು ವಿರೋಧಿಸಿ ಹೋರಾಟ ನಡೆಯಲಿದೆ. ನಮ್ಮ ಪರಂಪರೆಯ ಆಧಾರದಲ್ಲಿ ಸಂಸತ್ತಿನ ಹೊರಗೂ ಹೋರಾಟ ಮುಂದುವರಿಯಲಿದೆ. ಪ್ರಜಾಸತ್ತಾತ್ಮಕ ಭಾರತದಲ್ಲಿ ಮೋದಿ ಗ್ಯಾರೆಂಟಿ ಎಂಬುದೇ ವಿಚಿತ್ರ ಘೋಷಣೆ ಎಂದರು.

ಭಾರತ ಭಾರತವಾಗಿಯೇ ಉಳಿಯಬೇಕಾದರೆ, ಸಂವಿಧಾನ ಆಶಯಗಳು ಉಳಿಯಬೇಕೆಂದರೆ ಮೋದಿ ಕೂಟವನ್ನು ಸೋಲಿಸಲೇ ಬೇಕಿದೆ. ಮೋದಿ ವಿರುದ್ಧ ಮತ ಚಲಾಯಿಸುವುದೇ  ದೇಶಪ್ರೇಮಿ ಕೆಲಸ. ಮೋದಿ ಅಧಿಕಾರದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆ ವೇಳೆ ಕನಿಷ್ಟ ಬೆಂಬಲ ಬೆಲೆ ನೀಡಿ ರೈತರ ನೆರವಿಗೆ ಬರುವುದಾಗಿ ಸ್ವಾಮಿನಾಥನ್ ಶಿಪಾರಸುಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಬಿಜೆಪಿ, ನಂತರ ಶಿಪಾರಸ್ಸುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಅಫಿದವಿತ್ ಸಲ್ಲಿಸಿತು. ದೇಶದ ಆದಾಯವನ್ನು ಕಾರ್ಪೊರೇಟ್ ಶಕ್ತಿಗಳಿಗೆ ಧಾರೆ ಎರೆದ ಬಿಜೆಪಿ ಜನರಿಗೆದ್ರೋಹ ಎಸಗಿದೆ. ಅನ್ನದ ಋಣ ಹೊಂದಿರುವವರು ಮೋದಿ ಕೂಟದ ವಿರುದ್ಧ ಮತ ಚಲಾಯಿಸುವಂತೆ ನವೀನ್ ಕುಮಾರ್ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಸಮತಿ ಸದಸ್ಯರಾದ ಜಿ.ಪಿ.ಸತ್ಯನಾರಾಯಣ, ಅರವಿಂದ, ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X