ನಿರಂತರವಾಗಿ ಸುರಿಯುತ್ತರುವ ಮಳೆಯಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಎಲ್ಲ ಹಳ್ಳ ಕೊಳ್ಳಗಳೂ ತುಂಬಿದ್ದು, ಐಗೂರು ಹೊಳೆಯೂ ಭರ್ತಿಯಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಪರಿಣಾಮ ಸೇತುವೆ ದಾಟಲು ವಾಹನ ಸವಾರರು ಹರಸಾಹಸ ಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಳೆ ರಜೆ; ಶನಿವಾರ ಪೂರ್ಣ ತರಗತಿ ನಡೆಸಲು ಸೂಚನೆ
ಭಾರೀ ಮಳೆ ಹಿನ್ನೆಲೆಯಲ್ಲಿ ಕುಂಬಾರಹಳ್ಳಿ-ಐಗೂರು-ಹೆತ್ತೂರು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಕಲೇಶಪುರ-ಹೆತ್ತೂರು ಕಡೆ ಹಾದುಹೋಗುವ ಬದಲು ಯಸಳೂರು-ಶುಕ್ರವಾರಸಂತೆ ಮಾರ್ಗದಿಂದ ಪ್ರಯಾಣ ಬೆಳೆಸಬಹುದಾಗಿದೆ.