ಖಾಸಗಿ ವಿದ್ಯಾಸೌಧ ಶಿಕ್ಷಣ ಸಂಸ್ಥೆಗಳಿಗೆ ಬಾಂಬು ಬೆದರಿಕೆ ಹಾಕಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.

ವಿಜಯಪುರ ಇಂಡಸ್ಟ್ರೀಯಲ್ ಹಾಗೂ ಕೆ ಆರ್ ಪುರಂನಲ್ಲಿರುವ ಮಂಜೇಗೌಡ ಎಂಬುವರ ಮಾಲೀಕತ್ವದಲ್ಲಿರುವ ವಿದ್ಯಾಸೌಧ ಶಿಕ್ಷಣ ಸಂಸ್ಥೆಗಳಿಗೆ ಅಪರಿಚಿತ ವ್ಯಕ್ತಿಯಿಂದ ಮಧ್ಯಾಹನ ಒಂದು ಗಂಟೆಗೆ ಶಾಲೆಯ ಗೋಡೆಗಳನ್ನು ಬಾಂಬು ಮೂಲಕ ದ್ವಂಸ ಮಾಡುವುದಾಗಿ ಇ ಮೇಲ್ ಮೂಲಕ ಸಂದೇಶ ಕಳಿಸಲಾಗಿದೆ. ಶಾಲಾ ಪ್ರಾಂಶುಪಾಲರು ಶಿಕ್ಷಣ ಸಂಸ್ಥೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ?ಹಾಸನ l ವಿದ್ಯುತ್ ತಂತಿ ಸ್ಪರ್ಶ: ಎರಡು ಕಾಡಾನೆ ಸಾವು
ಹಾಸನ ನಗರ, ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ರಾತ್ರಿಯೇ ದೂರು ನೀಡಿದ್ದರು. ತಡರಾತ್ರಿಯೇ, ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಂತಹ ಸ್ಪೋಟಕ ವಸ್ತುಗಳು ಕಂಡು ಬಂದಿಲ್ಲ, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ
