ಚಿರತೆಯೊಂದು ಮನೆಯ ಅಂಗಳಕ್ಕೆ ಬಂದು ಮುಧೋಳ ನಾಯಿಯನ್ನು ಹೊತ್ತೊಯ್ದ ಘಟನೆ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಗರೆ ಗ್ರಾಮದಲ್ಲಿ ನಡೆದಿದೆ.
ಮನೆಯ ಮಾಲೀಕ ಕೃಷ್ಣಮೂರ್ತಿ, ಎಂದಿನಂತೆ ನಾಯಿಯನ್ನು ಮನೆಯ ಅಂಗಳದಲ್ಲಿ ಕಟ್ಟಿ ಹಾಕಿದ್ದರು. ಶನಿವಾರದಂದು ಮಧ್ಯ ರಾತ್ರಿ ವೇಳೆ ಚಿರತೆ ಮನೆಯ ಮುಂದೆ ಬಂದು, ಕಟ್ಟಿಹಾಕಿರುವ ಮುಧೋಳ ನಾಯಿಯನ್ನು ಸಾಯಿಸಿ, ಸ್ಥಳದಿಂದ ಹೊತ್ಯೋದಿದೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಾಯಿಯ ಮಾಲೀಕನ ಮನೆ ಕೇವಲ 100 ಅಡಿ ಅಂತರದಲ್ಲಿರುವುದು. ಚಿರತೆಯು ಮನೆಯ ಆವರಣದಲ್ಲಿದ್ದ, ನಾಯಿಯನ್ನು ದಾಳಿ ಮಾಡಿ ಕೊಂದು, ಅದನ್ನು ಹೊತ್ತೊಯ್ದ ದೃಶ್ಯ ಸುತ್ತಲಿನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ; ಸಚಿವ ಈಶ್ವರ್ ಖಂಡ್ರೆ
ಈ ಘಟನೆ ಕುರಿತು ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಬೋನ್ ಇಡುವಂತೆ ಒತ್ತಾಯಿಸಿದ್ದಾರೆ. ಹಗರೆ ಗ್ರಾಮ ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
