ಗೌರಿಬಿದನೂರು | ನಗರಕ್ಕೆ ಭೈರಸಾಗರ ಕೆರೆ ನೀರು; ಶಾಸಕರ ಯೋಜನೆಗೆ ರೈತರ ವಿರೋಧ

Date:

ವಾಟದಹೊಸಹಳ್ಳಿ ಅಮಾನಿ ಭೈರಸಾಗರ ಕೆರೆ ನೀರನ್ನು ನಗರಕ್ಕೆ ಹರಿಸುವಂತೆ ನಗರಸಭೆ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದ್ದು, ಈ ವಿಚಾರದಲ್ಲಿ ಶಾಸಕರ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ವೇದಿಕೆಯ ಮಾಳಪ್ಪ ಹೇಳಿದರು.

- Advertisement -

ಗೌರಿಬಿದನೂರು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಟದಹೊಸಹಳ್ಳಿ ಭಾಗದ ಬಹುತೇಕ ರೈತರು ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದು, ಮಳೆಯಾಧಾರಿತವಾಗಿರುವ ಕೆರೆ ನೀರನ್ನು ನಗರಕ್ಕೆ ಹರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಶಾಸಕರು ಈ ಭಾಗದ ರೈತರೊಂದಿಗೆ ಸಾಧಕ ಬಾದಕಗಳನ್ನು ಚರ್ಚಿಸದೆ ಏಕಪಕ್ಷಿಯ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ನಗರದಲ್ಲಿ ಇತ್ತೀಚಿಗೆ ನೀರಿಗಾಗಿ ನಡೆದ ಜಾಥಾದಲ್ಲಿ ನಗರಸಭೆ ನಾಮ ನಿರ್ದೇಶಿತ ಸದಸ್ಯರು ನೀಡಿರುವ ಹೇಳಿಕೆ ಖಂಡನೀಯ. ಅಲ್ಲಿ ರೈತರಿಲ್ಲ, ಕೆಲವರಿಂದ ಹಣ ಪಡೆದು ಹೋರಾಟವನ್ನು ಮಾಡಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅವರು ರೈತರಾದರೆ ಬಂದು ವಿದುರಾಶ್ವತಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಜನರನ್ನು ರೊಚ್ಚಿಗೆಬ್ಬಿಸುವ ಮಾತುಗಳನ್ನಾಡಿದ್ದಾರೆ. ಈ ಮೂಲಕ ನಗರಸಭೆ ಸದಸ್ಯರು ನಾಲಿಗೆಯನ್ನು ಹರಿಬಿಟ್ಟಿರುವುದು ಅಕ್ಷಮ್ಯ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ರೈತನಾಗಲು ಇರುವ ಮಾನದಂಡವಾದರೂ ಏನು?. ಈ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಹಾಗೂ ವಾಟದಹೊಸಹಳ್ಳಿ ರೈತರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ಮನೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ವಾಟದಹೊಸಹಳ್ಳಿಯ ಗ್ರಾಮ ಪಂಚಾಯತ್ ಆವರಣದಿಂದ ನಗರಸಭೆವರೆಗೆ ಜಾಥಾ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರೈತ ಮುಖಂಡ ಹರ್ಷವರ್ಧನ್ ರೆಡ್ಡಿ ಮಾತನಾಡಿ, ಶಾಸಕರು ಮತ್ತು ಸದಸ್ಯರು ಎತ್ತಿನ ಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸಿ, ಇಲ್ಲಿನ ನೀರನ್ನು ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ಆದರೆ ವಾಟದಹೊಸಹಳ್ಳಿ ಕೆರೆಯು ನೀರಿನ ಶೇಖರಣಾ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಸಣ್ಣ ನೀರಾವರಿ ಇಲಾಖೆಯವರೇ ತಿಳಿಸುತ್ತಿದ್ದಾರೆ. ಎತ್ತಿನ ಹೊಳೆ ನೀರು ಈವರೆಗೂ ಒಂದು ಕೆರೆಗೂ ಹರಿದಿಲ್ಲ ಮತ್ತು ಈಗ ಈ ಯೋಜನೆ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಇದು ನಗರಸಭೆ ಚುನಾವಣೆಗೆ ನಡೆಯುತ್ತಿರುವ ಗಿಮಿಕ್ ಅಷ್ಟೇ ಎಂದು ಕುಟುಕಿದರು.

ಇದರಿಂದ ವಾಟದಹೊಸಹಳ್ಳಿ ಮತ್ತು ನಗರ ಭಾಗದ ಜನತೆಗೆ ಮಾಡುತ್ತಿರುವ ಮೋಸವಾಗಿದೆ. ನಗರ ಭಾಗದಲ್ಲಿರುವ ಕೆರೆಗಳನ್ನು ಮೇಲ್ದರ್ಜೆಗೇರಿಸಿ ಪರ್ಯಾಯ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತ ಅಮರನಾರಾಯಣ ರೆಡ್ಡಿ ಮಾತನಾಡಿ, ನಗರ ಭಾಗದಲ್ಲಿರುವ ಮರಳೂರು, ಗೊಟಕನಾಪುರ, ಕಲ್ಲೂಡಿ, ಕೆರೆಗಳನ್ನು ಮೇಲ್ದರ್ಜೆಗೇರಿಸಿ, ಮಳೆ ಬಂದಾಗ ಉತ್ತರ ಪಿನಾಕಿನಿ ನದಿ ನೀರನ್ನು ತುಂಬಿಸಿಕೊಂಡು, ನಗರಭಾಗದಲ್ಲಿ ಕುಡಿಯಲು ಬಳಸಬಹುದು ಎಂದರು.

ರೈತ ಮಧು ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ನಗರದಲ್ಲಿನ ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿದರೆ, ನಗರಕ್ಕೆ ಬೇಕಾಗುವುದಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಣೆ ಮಾಡಬಹುದು. ಆದರೆ ಶಾಸಕರು ಎತ್ತಿನಹೊಳೆ ನೀರು ಬರುವ ಮುನ್ನವೇ ಟೆಂಡರ್ ಪ್ರಕ್ರಿಯೆ ಮುಗಿಸಿ ಪೈಪ್ ಲೈನ್ ಅಳವಡಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಶಾಸಕರು ನಗರದ ಭಾಗದ ಜನರ ಮನವಿಯನ್ನು ಮಾತ್ರ ಸ್ವೀಕರಿಸಿದ್ದಾರೆ. ಗ್ರಾಮೀಣ ಭಾಗದ ಜನರ ಮನವಿಯನ್ನು ಸ್ವೀಕರಿಸದೆ ತಾರತಮ್ಯ ಮಾಡುತ್ತಿದ್ದಾರೆ. ಈ ಯೋಜನೆಗೆ ಎಲ್ಲಾ ಪಂಚಾಯಿತಿಗಳ ವಿರೋಧವಿದೆ. ಇಲ್ಲಿಗೆ ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಬಂಡಪಲ್ಲಿ ಮೂರ್ತಿ, ನಾಗರಾಜು, ಚಿನ್ನಪ್ಪ, ಗಂಗಾಧರ್, ಕೃಷ್ಣಮೂರ್ತಿ, ಪ್ರಭಾಕರ್ ರೆಡ್ಡಿ, ರಾಜು, ವಿ ಎಂ ಸಿ ಮಂಜುನಾಥ್, ಕೆಂಪ ರಂಗಪ್ಪ, ಶಂಕರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೀರಪ್ಪ ಮೊಯಿಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ: ಸಿದ್ದರಾಮಯ್ಯ ಆಶಯ

ರಾಜಕಾರಣಿಗಳು ಸಾಹಿತಿಗಳಾಗುವುದು ವಿರಳ. ಆದರೆ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ...

ಉತ್ತರ ಕನ್ನಡ | ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಪಿಎಸ್‌ಐ ಕಡೆಗೆ ರಾಡ್ ಎಸೆದ, ಟ್ಯಾಂಕರ್ ಚಾಲಕನ ಬಂಧನ

ಉತ್ತರ ಕನ್ನಡ: ಮದ್ಯ ಸೇವಿಸಿ ಟ್ಯಾಂಕರ್ ಚಲಾಯಿಸಿದ್ದಲ್ಲದೆ, ವಾಹನವನ್ನು ಪೊಲೀಸ್ ಠಾಣೆಗೆ...

ವಿಜಯಪುರ |ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಆಲಮಟ್ಟಿಯ 30ಕ್ಕೂ ಅಧಿಕ ಒಣಗಿದ ಮರಗಳ ತೆರವಿಗೆ ಚಾಲನೆ

ಪ್ರವಾಸಿಗರ ಆಕರ್ಷಣೆಯಾಗಿದ್ದ ಆಲಮಟ್ಟಿಯ ರಸ್ತೆ ಬದಿಯ ಮರಗಳ ಸಾಲಿನಲ್ಲಿ ಒಣಗಿ, ಅಪಾಯಕಾರಿಯಾಗಿದ್ದ...