ಅರಸೀಕೆರೆಯ ಜೇನುಕಲ್ ನಗರದಲ್ಲಿ ಕಸ ವಿಲೇವಾರಿ ಮಾಡಬೇಕೆಂದು ಎಸ್‌ಡಿಪಿಐ ಕಾರ್ಯಕರ್ತರು ಒತ್ತಾಯಿಸಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಆಯುಕ್ತರು ಭರವಸೆ ನೀಡಿದ್ದಾರೆ.
ಜೇನುಕಲ್ ನಗರದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಚರಂಡಿಯ ಕಸವನ್ನು ಮನೆಗಳ ಮುಂದೆಯೇ ಹಾಕಲಾಗಿದೆ. ಕಸವನ್ನು ತೆರವುಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸ್‌ಡಿಪಿಐ ಕಾರ್ಯಕರ್ತರ ನೀಡಿದ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ ನಗರಸಭೆ ಆಯುಕ್ತರು, “ವಾರ್ಡ್‌ಗೆ ಭೇಟಿ ನೀಡಿ, ಕಸ ವಿಲೇವಾರಿ ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ, ಸಂಘಟನೆಯ ತಾಲೂಕು ಅಧ್ಯಕ್ಷ ಸಲ್ಮಾನ್ ಪಾಷಾ,ಉಪಾಧ್ಯಕ್ಷ ಸದ್ದಾಂ ಹುಸೇನ್ ,ಬ್ರಾಂಚ್ ಅಧ್ಯಕ್ಷ ಯಾಸಿನ್, ಕಾರ್ಯದರ್ಶಿ ಮುಬಾರಕ್,ಸದಸ್ಯರಾದ ಜುನೈದ್,ನದೀಮ್, ಅಕ್ರಂ,ರೋಷನ್ ಸೇರಿದಂತೆ ಹಲವರು ಇದ್ದರು.