ಹಾಸನ ಜಿಲ್ಲೆಯಲ್ಲಿ ಮಳೆ ಬರುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು, ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರದಿಂದ ಮಳೆಯ ಆರ್ಭಟ ಜೋರಾಗಿದೆ.
ಮಳೆಯ ಆಗಮನಕ್ಕೆ ರೈತರ ಮೊಗದಲ್ಲಿ ಒಂದು ಕಡೆ ಸಂತೋಷ ಕಂಡು ಬಂದರೆ, ಇನ್ನೊಂದು ಕಡೆ ಚಿಕ್ಕಪುಟ್ಟ ವ್ಯಾಪಾರ ಮಾಡುವವರು ಸರಿಯಾದ ವ್ಯಾಪಾರ ಇಲ್ಲದೇ ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳಗ್ಗಿನಿಂದಲೆ ನಿರಂತರವಾಗಿ ಮಳೆ ಬರುತ್ತಿದ್ದರೂ ಆಗಾಗ ಸಲ್ಪ ಬಿಡುವು ಕೊಟ್ಟು ಮತ್ತೆ ಮಳೆ ಸುರಿಯುತ್ತಿದೆ. ಹಾಸನ ಜಿಲ್ಲೆಯ ಅನೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ.

ಮಕ್ಕಳಿಗೆ ಶಾಲಾ ರಜೆ ಇರುವುದರಿಂದ ಮಳೆಯಿಂದಾಗಿ ಅಷ್ಟೊಂದು ತೊಂದರೆ ಉಂಟಾಗಿಲ್ಲ. ಕೆಲವು ಭಾಗಗಳಲ್ಲಿ ಶಾಲೆ ಶುರು ಆಗಿರುವುದರಿಂದ ಮಳೆಯಿಂದ ಅವರಿಗೆ ಸಮಸ್ಯೆ ಆಗುತ್ತಿದೆ.
ಇನ್ನು ರೈತರಲ್ಲಿ ಮೊಗದಲ್ಲಿ ಮಂದಹಾಸ ಬೀರುತ್ತಿದೆ. ಮಳೆಯಿಂದ ಕೆರೆ ಕಟ್ಟೆಗಳು ತುಂಬುತ್ತಿವೆ. ಹಾಗಾಗಿ, ಕೃಷಿ ಚಟುವಟಿಕೆಗಳಿಗೆ ನೀರು ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಇನ್ನು, ರಸ್ತೆಯ ಗುಂಡಿಗಳಲ್ಲಿ ಹೆಚ್ಚು ನೀರು ನಿಂತಿದ್ದರಿಂದ ವಾಹನ ಚಾಲಕರಿಗೆ ಗುಂಡಿಗಳಿಂದ ಅಪಘಾತಗಳು ಸಂಭವಿಸಬಹುದು. ಇದೇ ರೀತಿ ಮಳೆ ಸುರಿಯುತ್ತಿದ್ದರೆ ಅಪಾಯಗಳು ಕೂಡ ಸಂಭವಿಸಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
