ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ರಾಮದೇವರಹಳ್ಳಿ ಹಳ್ಳದ ನೀರಿನಲ್ಲಿ ದೈತ್ಯಾಕಾರದ ಹುಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಭಾನುವಾರ ಹಳ್ಳದ ಕಡೆಗೆ ಹೋದಾಗ ನೀರಿನಲ್ಲಿ ಸತ್ತು ಬಿದ್ದಿರುವ ಹುಲಿಯನ್ನು ಕಂಡು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹುಲಿಯ ಮೃತದೇಹ ಕಂಡು ಸ್ಥಳೀಯರು ಮರುಕ ವ್ಯಕ್ತಪಡಿಸಿದರು. ನಮ್ಮ ಭಾಗದಲ್ಲಿ ಈವರೆಗೂ ಹುಲಿಯು ಕಂಡುಬಂದಿರಲಿಲ್ಲ. ಇದು ಚಿಕ್ಕಮಗಳೂರಿನಿಂದ ಬಂದಿರಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ಬೆಳೆ ಬೆಳೆಯಲು, ಜಮೀನು ಅಳತೆ ಮಾಡಲು ಸುತ್ತಮುತ್ತಲಿನವರು ಬಿಡುತ್ತಿರಲಿಲ್ಲ
ಬೇಲೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹುಲಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
