ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಪ್ರಭಾಕರ್ (45 ವ.), ಪ್ರತೀಕ್ (12 ವ.) ಮೃತಪಟ್ಟ ದುರ್ದೈವಿಗಳು.
12 ವರ್ಷದ ಬಾಲಕ ಪ್ರತೀಕ್ ಮೂಲತಃ ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದವನು. ಬೇಸಿಗೆ ರಜೆ ಹಿನ್ನಲೆಯಲ್ಲಿ ಮಾವ ಪ್ರಭಾಕರ್ ಮನೆಗೆ ಬಂದಿದ್ದ. ನಿನ್ನೆ ಇಬ್ಬರೂ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದಿದ್ದಾನೆ.
ಈಜು ಬಾರದವ ಕೆರೆ ಹಾರಿ ಸಾವು ಕಂಡ ಪ್ರಭಾಕರ್!: ಪ್ರತೀಕ್‌ನನ್ನು ರಕ್ಷಿಸಲು ಪ್ರಭಾಕರ್ ಸಹ ಕೆರೆಗೆ ಇಳಿದಿದ್ದಾನೆ. ಆದರೆ ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಪ್ರಭಾಕರ್ ಹಾಗೂ ಪ್ರತೀಕ್ ಜಲಸಮಾಧಿಯಾಗಿದ್ದಾರೆ. ಪೊಲೀಸ್ ಹಾಗೂ ಅಗ್ನಿ ಶಾಮಕ ದಳದಿಂದ ಬಿರುಸಿನ ಕಾರ್ಯಾಚರಣೆ: ಬಳಿಕ ಕಾರ್ಯಾಚರಣೆ ನಡೆಸಿದ ಗಂಡಸಿ ಹೋಬಳಿಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮೃತದೇಹಗಳನ್ನು ಹೊರ ತೆಗೆದರು.
ಇದನ್ನೂ ಓದಿದ್ದೀರಾ?ಹಾಸನ | ಜನಗಣತಿ ಯಶಸ್ವಿಗೊಳಿಸಲು ಸೂಚನೆ
ಈ ಸಂಬಂಧ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿ ಬದುಕಬೇಕಾದವರನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.





