ಕಾಡಾನೆ ಹಾವಳಿ ತಡೆಯಲು ಹಾಕಿದ್ದ ಸೋಲಾರ್ ಬೇಲಿಯನ್ನು ಮುರಿದು ಒಂಟಿಸಲಗವೊಂದು ಕಾಫಿ ತೋಟ ದಾಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಳೇಬಾಗೆ ಸಮೀಪ ನಡೆದಿದೆ.
ದಿವಾನ್ ಎಸ್ಟೇಟ್‌ಗೆ ಹಾಕಿದ್ದ ಸೋಲಾರ್ ತಂತಿ ಬೇಲಿಯನ್ನು ಕಾಡಾನೆಯೊಂದು ತನ್ನ ಕಾಲಿನಿಂದ ಮುರಿದಿದೆ.
ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದ ತಣ್ಣೀರ್ ಹೆಸರಿನ ಕಾಡಾನೆ ಇದೀಗ ಕೊಡಗು ಭಾಗದಿಂದ ಸಕಲೇಶಪುರಕ್ಕೆ ಮರಳಿದ್ದು, ಸೋಲಾರ್ ಮುರಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಠ್ಯದ ಜೊತೆಗೆ ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು: ಉಪಕುಲಪತಿ ಡಾ. ಬಿ.ಡಿ. ಕುಂಬಾರ್
ಸೋಲಾರ್ ತಂತಿ ಮೇಲೆ ಮರ ಉರುಳಿಸಿ ಕಾಲಿನಿಂದ ತುಳಿದು ತನ್ನ ಚಾಣಾಕ್ಷತೆಯಿಂದ ಸೋಲಾರ್ ಬೇಲಿ ಮುರಿಯುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.