ಹಾವೇರಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿನ ಚಕ್ರ ಹರಿದು ಎರಡೂ ಕಾಲುಗಳು ಮುರಿದಿದ್ದರಿಂದ ತೀವ್ರ ಗಾಯಗೊಂಡಿದ್ದ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ಕರಿಯಪ್ಪ, ತಮ್ಮೂರಿಗೆ ಹೋಗುವ ಬಸ್ ಹತ್ತಲೆಂದು ನಿಲ್ದಾಣದೊಳಗೆ ಹೊರಟಿದ್ದರು. ಬಸ್ ಅತೀ ವೇಗದಲ್ಲಿ ಬಂದು ಕರಿಯಪ್ಪ ಅವರಿಗೆ ಗುದ್ದಿತ್ತು. ಗುದ್ದಿದ್ದ ರಭಸಕ್ಕೆ ಕರಿಯಪ್ಪ ಅವರ ಕಾಲುಗಳ ಮೇಲೆ ಬಸ್ಸಿನ ಚಕ್ರ ಹರಿದಿತ್ತು.
ಇದನ್ನು ಓದಿದ್ದೀರಾ? ವಿಕ್ರಂ ಗೌಡರದ್ದು ನಕಲಿ ಎನ್‌ಕೌಂಟರ್ ಅಲ್ಲ, ಮಷೀನ್ ಗನ್ ಇದ್ದಿದ್ದಕ್ಕೆ ಹತ್ಯೆ: ಆಂತರಿಕ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ
ಕೂಡಲೇ ಗಾಯಗೊಂಡಿದ್ದ ಕರಿಯಪ್ಪನನ್ನು ಜಿಲ್ಲಾ ಆಸ್ಪತ್ರೆ ಕರೆದೊಯ್ದು, ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆಗ ಅವರು ಚಿಕಿತ್ಸೆ ಫಲಕಾರಿಯಾಗದೆ, ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.