ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶದ ಜನರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಂವಿಧಾನ ರಚನೆಗಾಗಿ ಶ್ರಮವಹಿಸಿದ್ದಾರೆ ಎಂದು ಹಾವೇರಿಯಲ್ಲಿ ನಡೆದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿಗಾಗಿ ಹಾಗೂ ದೇಶದ ಜನತೆಗೆ ಸಮಾಜಿಕ ನ್ಯಾಯ ಒದಗಿಸಲು ತಮ್ಮ ಸಮಾಜಮುಖಿ ಹೋರಾಟದ ಮೂಲಕ ಸಂವಿಧಾನದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ನೀಡಿದ್ದಾರೆ. ನಾವು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ತತ್ವದಡಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಸಂವಿಧಾನವನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು ಮತ್ತು ಅವರ ಬದುಕಿನ ಸಂದೇಶಗಳನ್ನು ಪಾಲಿಸಿ, ಸಂವಿಧಾನ ಪಾಲನೆ ಮಾಡಿ ಅವರಿಗೆ ಗೌರವನಮನ ಸಲ್ಲಿಸಬೇಕು ಎಂದರು.
ಈ ವರದಿ ಓದಿದ್ದೀರಾ? ಗದಗ | ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ: ಅನ್ನ ಸಂತರ್ಪಣೆ
ಈ ಸಂದರ್ಭದಲ್ಲಿ ಮಾಜಿ ಶಾಸಕ ನೆಹರೂ ಓಲೇಕಾರ, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಲಮನಿ, ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಈರಣ್ಣ ಸಂಗೂರ, ಬಾಬು ಮೂಮೀನಗಾರ, ಶ್ರೀಕಾಂತ ಪೂಜಾರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಕಿಟ್ಟಪ್ಪ ಕರ್ಜಗಿ, ಅಶೋಕ ಮರೆಣ್ಣನವರ, ಯಲ್ಲಪ್ಪ ಮಾಸೂರ, ಎನ್ ಬಿ ಕಾಳೆ, ನಿವೃತ್ತ ಅಧಿಕಾರಿ ಆಜನೇಯಪ್ಪ, ಮಾಲತೇಶ ಯಲ್ಲಾಪುರ, ಶಂಭು ಕಳಸದ, ಸುರೇಶ ಭಲವಾದಿ, ವಿಭೂತಿ ಶೆಟ್ಟಿ, ರಾಮಪ್ಪ ಗಾಳೆಮ್ಮನವರ, ಸುನೀಲ ಬೇಟಗೇರಿ, ಜಗದೀಶ ಹರಿಜನ, ಸುಭಾಸ ಬೆಂಗಳೂರು, ರಾಜು ಗಾಳೆಪ್ಪನವರ, ರಾಕೇಶ ಹೆರ್ಕಲ್, ಮಾಲತೇಶ ದೇವಸೂರ, ಹನಮಂತಪ್ಪ ಸಿಡಿ, ರಘು ಮಾಳಗಿ, ಮಂಜುನಾಥ, ಜಗದೀಶ ಸವಣೂರ, ಶಂಕ್ರಣ್ಣ ಲಕ್ಕಣ್ಣನವರ, ಶೇಖಣ್ಣ ಮಾಳಗಿ ಸೇರಿದಂತೆ ವಿವಿಧ ಸಮಾಜದ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.