ಬಿಜೆಪಿಗರ ಬೆವರಿಳಿಸಿದ ಶತಾಬ್ದಿ ರಾಯ್ | ದೇವರನ್ನೇ ಕರೆತಂದ ಮೋದಿ, ಕಳ್ಳರನ್ನು-ಕಪ್ಪುಹಣವನ್ನು ಕರೆತರಲಾಗಲಿಲ್ಲವಲ್ಲ?

Date:

  • ಮೋದಿಜೀ ರಾಮನನ್ನು ಕರೆತಂದರು, ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ?
  • ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?

ಇತ್ತೀಚೆಗೆ, ಲೋಕಸಭೆ ಒಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿತ್ತು. ಅರ್ಥಪೂರ್ಣ ಮಾತುಗಳಿಗೆ ಸಾಕ್ಷಿಯಾಗಿತ್ತು. ನಿಜನುಡಿಗಳು ಸಂಸದರ ಕಣ್ಣು ತೆರೆಸಿತ್ತು. ಸತ್ಯ ಮಾತಾಡಲು ಪ್ರೇರೇಪಿಸಿತ್ತು. ಪ್ರಶಂಸೆಗೆ ಪಾತ್ರವಾಗಿತ್ತು. ಇದು ಕಳೆದ ಫೆಬ್ರವರಿಯಲ್ಲಿ ನಡೆದ ಚರ್ಚೆಯಾದರೂ, ವಿಡಿಯೋ ಈಗ ವೈರಲ್ ಆಗುತ್ತಿದೆ. ಆಡಿರುವ ಮಾತುಗಳು ಸತ್ಯವನ್ನೇ ಹೇಳುತ್ತಿರುವುದರಿಂದ, ಈಗಲೂ ಕೇಳುವಂತಿವೆ. ದೇಶವಾಸಿಗಳ ಕಣ್ಣು ತೆರೆಸುತ್ತಿವೆ.

- Advertisement -

ಪಶ್ಚಿಮ ಬಂಗಾಳದ ಬಿರ್ಭುಮ್ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದ ತೃಣಮೂಲ್ ಕಾಂಗ್ರೆಸ್ ಸಂಸದೆ ಶತಾಬ್ದಿ ರಾಯ್, ಮೊದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರತ್ತ ತಿರುಗಿ ಕೈ ಮುಗಿದರು. ಎಲ್ಲರಿಗೂ ಆಶ್ಚರ್ಯ. ಆದರೂ ಆಕೆಯ ಮಾತುಗಳನ್ನು ಕೇಳುವ ಸಲುವಾಗಿ, ಸುಮ್ಮನಿದ್ದರು. ನಂತರ ಶುರುವಾಯಿತು ಶತಾಬ್ದಿ ರಾಯ್ ರ ಬತ್ತಳಿಕೆಯಲ್ಲಿದ್ದ ಬಾಣಗಳ ಪ್ರಯೋಗ. ಆಕೆಯ ದಿಟ್ಟ ಸ್ಪಷ್ಟ ನುಡಿಗಳು ನೇರವಾಗಿ ಪ್ರಧಾನಿ ಮೋದಿಯನ್ನೇ ಕೇಂದ್ರೀಕರಿಸಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

”ದೇಶದ ಮೂಲೆ ಮೂಲೆಯಲ್ಲಿ ರಾಮ-ಸೀತಾ ಉದ್ಗಾರ ಕೇಳಿಬರುತ್ತಿದೆ. ಇಡೀ ದೇಶವೇ ರಾಮರಾಜ್ಯವಾಗಿದೆ. ಬಿಜೆಪಿಗರು ದೊಡ್ಡ ಧ್ವನಿಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ… ಮೋದಿಜೀ ರಾಮನನ್ನು ಕರೆತಂದರು, ಭಗವಂತನನ್ನು ಭೂಮಿಗೆ ಕರೆತಂದರು… ಬಹಳ ಒಳ್ಳೆಯ ಕೆಲಸ. ಮೆಚ್ಚಬೇಕಾದ್ದೆ. ಒಬ್ಬ ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ? ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನೇ?

”ನೇಷನ್ ವಾಂಟ್ಸ್ ಟು ನೋ- ದೇಶಕ್ಕೆ ಗೊತ್ತಾಗಬೇಕಿದೆ- ಒಬ್ಬ ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನಾಗಿದ್ದರೆ, ಒಬ್ಬ ನೀರವ್ ಮೋದಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ಮೆಹುಲ್ ಚೊಕ್ಸಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ವಿಜಯ್ ಮಲ್ಯನನ್ನು ಕರೆತರಲಾಗಲಿಲ್ಲವೇ? ಚಿಕ್ಕ ಮನುಷ್ಯ ಶ್ರೀರಾಮಚಂದ್ರನನ್ನೇ ಕರೆತರುವಷ್ಟು ಶಕ್ತಿವಂತ, ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?”

ದೇವರನ್ನೇ ಕರೆತಂದವರಿಗೆ ಮನುಷ್ಯರನ್ನು ಕರೆತರಲಾಗಲಿಲ್ಲವಲ್ಲ? ಕಪ್ಪು ಹಣವನ್ನು ವಾಪಸ್ ತರಲಾಗಲಿಲ್ಲವಲ್ಲ ಎಂದ ಶತಾಬ್ದಿ ರಾಯ್, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಬಾಣಗಳಂತೆ ಪ್ರಯೋಗಿಸಿ ಮೋದಿ ಮತ್ತವರ ಪರಿವಾರವನ್ನು ಪಲ್ಟಿ ಹೊಡಿಸಿಬಿಟ್ಟರು. ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಇದನ್ನು ಓದಿದ್ದೀರಾ?: ಮಹಾ ಡಿಸಿಎಂ ಅಜಿತ್ ಪವಾರ್‌ಗೆ ಲಾಟರಿ; ತೆರಿಗೆ ಇಲಾಖೆ ಜಪ್ತಿ ಮಾಡಿದ್ದ 1,000 ಕೋಟಿ ರೂ. ಆಸ್ತಿ ವಾಪಸ್!

ಆಕೆಯ ಕಟುಸತ್ಯದ ಮಾತುಗಳಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಗುಳು ನುಂಗುತ್ತಿದ್ದರು, ತುಟಿಬಿಚ್ಚದೆ ಕೂತಿದ್ದರು. ಇಡೀ ಸದನ ಆಕೆಯ ಕೆಂಡದುಂಡೆಯಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ವಿರೋಧ ಪಕ್ಷಗಳ ಸಂಸದರು ಮೇಜು ಕುಟ್ಟಿ ಪ್ರೋತ್ಸಾಹಿಸುತ್ತಿದ್ದರು. ಮಹಿಳೆಯರು ಹೆಮ್ಮೆಯಿಂದ ಬೀಗುತ್ತಿದ್ದರು.

ಶತಾಬ್ದಿ ರಾಯ್ ಅವರ ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಮಾಡುತ್ತಿದ್ದಾರೆ.

ಇದು ಡಿಜಿಟಲ್ ಜಗತ್ತು. ಮೋದಿ ಮತ್ತು ಪರಿವಾರದ ಆಟವನ್ನು ಹತ್ತು ವರ್ಷಗಳ ಕಾಲ ಸಹಿಸಿದ ದೇಶ, ಈಗ ತಿರುಗಿ ಕೊಡುತ್ತಿದೆ. ಕಳ್ಳರನ್ನು, ಕಪ್ಪು ಹಣವನ್ನು ವಾಪಸ್ ತರದಿದ್ದರೂ, ಸತ್ಯದ ಕಿಡಿನುಡಿಗಳನ್ನು ವಾಪಸ್ ತೆಗೆದುಕೊಳ್ಳಲೇಬೇಕಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದ ಖಜಾನೆ ಖಾಲಿ, ಆದರೂ ಪ್ರಧಾನಿ ಹುಟ್ಟುಹಬ್ಬಕ್ಕೆ ಕೋಟಿ ಕೋಟಿ ಪೋಲು: ತೇಜಸ್ವಿ ಯಾದವ್ ಆರೋಪ

ಬಿಹಾರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ತೊಂದರೆಯಲ್ಲಿರುವಾಗ ಮತ್ತು ರಾಜ್ಯ...

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ಅಕಾಲಿಕ ನಿಧನ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರ ಸಂತಾಪ

ಸಿಎನ್‌ಎನ್-ನ್ಯೂಸ್18 ವಾಹಿನಿಯ ಹಿರಿಯ ರಾಜಕೀಯ ಪತ್ರಕರ್ತೆ ಪಾಯಲ್ ಮೆಹ್ತಾ (46) ಅವರು...

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ: ರಾಜಕೀಯ ಲಾಭ ಸಿಗುತ್ತಾ?

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು...