“ಬಾಬೂಜಿ ಕೇವಲ ನಾಯಕರಾಗಿ ಅಷ್ಟೇ ಅಲ್ಲದೇ ಸಾಮಾಜಿಕ ನ್ಯಾಯದ ಹರಿಕಾರರಾಗಿ, ಶ್ರೇಷ್ಠ ಸಂಸದೀಯ ಪಟುವಾಗಿ ಜನಮಾನಸದಲ್ಲಿ ನೆಲೆಯೂರಿದ್ದಾರೆ” ಎಂದು ಪುರಸಭೆ ಅಧ್ಯಕ್ಷ ಪರಶುರಾಮ ಖಂಡನವರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿಯಲ್ಲಿ ಅವರು ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
“ಅಪ್ಪಟ ಪ್ರಜಾಪಭುತ್ವವಾದಿಯಾಗಿದ್ದ ಬಾಬೂಜಿ ಅವರ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಂಡು ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದರು.
‘ದೇಶದ ಪಗತಿಯಲ್ಲಿ ನಮ್ಮ ಪಗತಿಯಿದೆ, ವಿಮೋಚನೆಯಲ್ಲಿ, ನಮ್ಮ ವಿಮೋಚನೆಯಿದೆ” ಎಂದು ಬಾಬೂಜಿ ಸದಾ ಹೇಳುತ್ತಿದ್ದರು” ಎಂದು ನೆನಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಗನವಾಡಿ ಮೊಟ್ಟೆ ಖರೀದಿಯಲ್ಲಿ ಅಕ್ರಮ ಆರೋಪ; ಮೇಲ್ವಿಚಾರಕಿ ಅಮಾನತು
ಬ್ಲಾಕ್ ಕಾಂಗ್ರೆಸ್ ಅಧ್ಯಕರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಜಿಪಂ ಕೆಡಿಪಿ ಸದಸ್ಯ ಕೊಟಪ್ಪ ಕುದರಿಸಿದ್ದನವರ, ತಾಪಂ ಕೆಡಿಪಿ ಸದಸ್ಯ ಶಿವು ತಳವಾರ್. ಹನೀಫ್ ಬಂಕಾಪೂರ, ಉಮೇಶ ಮಾಳಗಿ, ಶಿವು ಭದ್ರಾವತಿ, ಉಮೇಶ ದೊಡ್ಡಮನಿ, ರಾಮಚಂದ್ರ ಕಲ್ಲೇರ, ಸುರೇಶ ನಾಗಣ್ಣನವರ, ಮೇಕಾಜಿ ಕಲಾಲ, ಬಿ.ಜಿ.ದೊಡ್ಡಮನಿ, ವಿರುಪಾಕ್ಷಪ್ಪ ದಾಳೇರ, ರಾಜ್ಯ ಗಾಡಗೇರ, ನಿಜಗುಣಿ ಮಳೆಣ್ಣನವರ, ಚಂದ್ರಗೌಡ ಪಾಟೀಲ, ಅಣ್ಣಪ್ಪ ಗೆಜ್ಜೆಹಳ್ಳಿ, ಪ್ರಕಾಶ ನಾಯಕ, ಎಂ.ಎಂ.ಮುಲ್ಲಾ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
