ಪ್ರಮಾಣಪತ್ರವೊಂದನ್ನು ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಕರ್ಜಗಿ ಹೋಬಳಿ ಉಪ ತಹಶೀಲ್ದಾರ್ ಸೋಮಪ್ಪ ಶಿವಪ್ಪ ನಾಯ್ಕರ್ ಎರಡು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಪಂಚಯ್ಯ ಹೊಳಬಸಯ್ಯ ಹಿರೇಮಠ ಇವರ ಸಹೋದರನ ಹೆಸರಿನಲ್ಲಿ ವ್ಯವಸಾಯ ಖರೀದಿ ಮಾಡಿದ್ದರು. ಈ ಟ್ರ್ಯಾಕ್ಟರಿಗೆ ಸಂಬಂಧಿಸಿದಂತೆ ಬೋನಫೈಡ್ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಈ ಬೋನಫೈಡ್ ಪ್ರಮಾಣ ಪತ್ರ ನೀಡಲು ಕರ್ಜಗಿ ಉಪ ತಹಶೀಲ್ದಾರ್ ಸೋಮಪ್ಪ ಶಿವಪ್ಪ ನಾಯ್ಕರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ, ಪ್ರತಿ ಫೈಲ್ ವಿಲೇವಾರಿ ಮಾಡಲು ಐದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.
ಅರ್ಜಿಯನ್ನು ವಿಲೇವಾರಿ ಮಾಡಲು ಸದರಿ ಫಿರ್ಯಾದುದಾರರಿಂದ ಸೋಮಪ್ಪ ಶಿವಪ್ಪ ನಾಯ್ಕರ್ ಅಧಿಕಾರಿ(ಜುಲೈ 24) ಎರಡು ಸಾವಿರ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.

ಇದನ್ನು ಓದಿದ್ದೀರಾ? ಧಾರವಾಡ | ಜುಲೈ 25, 26 ರಂದು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತನನ್ನು ಕರ್ಜಗಿ ನಾಡಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ಹಾವೇರಿ ನಗರದಲ್ಲಿನ ಆರೋಪಿತನ ಮನೆಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
