ರಾಜ್ಯಾದ್ಯಂತ ಬರ ಆವರಿಸಿದೆ. ಇದನ್ನೇ ಲಾಭ ಮಾಡಿಕೊಂಡು ಕೆಲವರು ದುಡ್ಡು ಮಾಡುತ್ತಿದ್ದಾರೆ. ಆದರೆ, ಅಲ್ಲೊಂದು ಯುವಕರ ಗುಂಪು ಇಡೀ ಗ್ರಾಮಕ್ಕೆ ತನ್ನ ಸ್ವಂತ ಖರ್ಚಿನಲ್ಲೇ ನೀರನ್ನು ಪೂರೈಕೆ ಮಾಡುತ್ತಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಯುವಕರು ಸ್ವಂತ ಖರ್ಚಿನಲ್ಲಿ ನೀರು ಪೂರೈಕೆ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಟ್ರ್ಯಾಕ್ಟರ್ ಮೇಲೆ ಎರಡು ಸಿಂಟೆಕ್ಸ್‌ನಲ್ಲಿ ಯುವಕರು ನೀರು ತರಿಸಿದ್ದು, ನೆತ್ತಿ ಸುಡುವ ಬಿರಿ ಬಿಸಿಲಿನಲ್ಲಿಯೇ ಸ್ಥಳೀಯರು ಸರದಿ ಸಾಲಿನಲ್ಲಿ ನೀರು ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ರಾಜ್ಯದಲ್ಲಿ ಮೊದಲೇ ಭೀಕರ ಬರಗಾಲ ಅವರಸಿದೆ. ಹನಿ ನೀರಿಗಾಗಿ ಜನರು ಪರದಾಡುತ್ತಾ ಇದ್ದಾರೆ. ಬಂಗಾರದಂತೆ ನೀರನ್ನು ಜೋಪಾನ ಮಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಹಾವೇರಿಯ ಬಾಳೆಂಬೀಡ ಗ್ರಾಮದ ಯುವಕರು ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದಾರೆ.
ಬಾಳಂಬೀಡ ಗ್ರಾಮದ ಜನರ ದಾಹ ಇಂಗಿಸಲು ದುಂಡಣ್ಣನವರ ಕುಟುಂಬ ಮುಂದಾಗಿದೆ. ಯುವಕರು ಎರಡು ಟ್ರ್ಯಾಕ್ಟರ್‌ನಲ್ಲಿ ನೀರು ತುಂಬಿಸಿ ಜನರಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿದ್ದಾರೆ. ತಮ್ಮದೇ ಬೋರ್‌ವೆಲ್ ನೀರನ್ನು ಗ್ರಾಮಕ್ಕೆ ಹಂಚಿ ಸೈ ಎನಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ: ಜಿಲ್ಲಾಧಿಕಾರಿ
ಇನ್ನು ಕೊಳವೆ ಬಾವಿ, ಕೆರೆ ಕಟ್ಟಿಗಳು ಬತ್ತಿ ಹೋಗುತ್ತಿದ್ದು, ನೀರಿಲ್ಲದ ಪರಿಣಾಮ ಗ್ರಾಮದ ಜನರು ಹೈರಾಣಾಗುತ್ತಿದ್ದಾರೆ.
ವರದಿ: ಜಗದೀಶ ಹರಿಜನ, ಸಿಟಿಜನ್ ಜರ್ನಲಿಸ್ಟ್ ಹಾನಗಲ್
