ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ. ‘ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುತ್ತಿದೆ ಎಂದು ಎಸ್ ಎಫ್ ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ್ ಎಸ್ ಹೇಳಿದರು.
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕಿಗಾಗಿ, ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಎಸ್ಎಫ್ಐನ 5ನೇ ತಾಲೂಕು ಸಮ್ಮೇಳನವು ಎಸ್.ಬಿ.ಬಿ.ಎಮ್.ಡಿ ಮಹಾವಿದ್ಯಾಲಯದಲ್ಲಿ ನಡೆಯಿತು.
ಸಮ್ಮೇಳನದ ಪೂರ್ವದಲ್ಲಿ ಚನ್ನಪ್ಪ ಕುನ್ನೂರು ವಿದ್ಯಾಲಯದಿಂದ ಎಸ್.ಬಿ.ಬಿ.ಎಮ್.ಡಿ ಕಾಲೇಜಿನ ವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “‘ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಕೇಂದ್ರ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ. ಇದರ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿ-ಯುವಜನರ ಮುಂದಾಗಬೇಕು” ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಗಳನ್ನು ಹಿಮೆಟ್ಟಿಸುವುದಕ್ಕಾಗಿ ಸಂಘರ್ಷ ಹೋರಾಟಗಳನ್ನು ನಡೆಸಲಾಗಿದೆ. ಸರ್ಕಾರಿ ಶಾಲಾ-ಕಾಲೇಜ್ ವಿಶ್ವವಿದ್ಯಾಲಯ, ಹಾಸ್ಟೆಲ್‍ಗಳನ್ನು ಬಲಗೊಳಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ನಡೆಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಾಚಾರ್ಯರಾದ ಆರ್ ಎಸ್ ಭಟ್ ಮಾತನಾಡಿ, “ಎಸ್ಎಫ್ಐ ವಿದ್ಯಾರ್ಥಿ ಚಳುವಳಿಯು ವಿದ್ಯಾರ್ಥಿಗಳ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಪರವಾಗಿ ಹೀಗೆ ನಿರಂತರವಾಗಿ ಚಳುವಳಿ ರೂಪಿಸುವ ಸಂಘಟನೆಯ ನ್ಯಾಯಯುತ ಬೇಡಿಕೆಗಳು ಈಡೇರಲಿ. ಅಭ್ಯಾಸ ಕಡೆ ಹೆಚ್ಚು ಗಮನಾರ್ಹ ನೀಡಬೇಕು. ದೇಶದ ಮುಂದಿನ ಪ್ರಜೆಗಳು ವಿದ್ಯಾರ್ಥಿ- ಯುವಕರು ಜಾಗೃತರಾಗಬೇಕು. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕಿಗಳಿಗೆ ಹೋರಾಟ, ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಕೋರಿ ಮಾತನಾಡಿದರು.
ಇದನ್ನು ಓದಿದ್ದೀರಾ? ಹಾವೇರಿ | ಯೆಚೂರಿಯವರ ನಿಧನ ದೇಶದ ದುಡಿಯುವ ಜನ ಚಳುವಳಿಗೆ ತುಂಬಲಾರದ ನಷ್ಟ: ಬಸವರಾಜ ಪೂಜಾರ
ಮುಖ್ಯೋಪಾಧ್ಯಾಯರಾದ ಕೆ.ಬಿ.ಚೆನ್ನಪ್ಪ ಮಾತನಾಡಿ, ತಾಲೂಕಿನ ಬಸ್ಸಿನ ಸಮಸ್ಯೆ ವಿಪರೀತವಾಗಿದ್ದು , ರಿಹಾರಕ್ಕಾಗಿ ಅಧಿಕಾರಿಗಳು ಮುಂದಾಗಬೇಕು. ಎಸ್ಎಫ್ಐ ವಿದ್ಯಾರ್ಥಿ ಚಳುವಳಿಯು ಕೇವಲ ಹೋರಾಟ ಮಾಡುವುದು ಅಷ್ಟೇ ಅಲ್ಲದೆ, ನಾಯಕತ್ವ ಗುಣವನ್ನು ಬೆಳೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ದುರುಗಪ್ಪ ಯಮ್ಮಿಯವರ, ಅಣ್ಣಪ್ಪ ಕೆ, ದೇವರಾಜ ಅಕ್ಕಸಲಿ ವೇದಿಕೆ ಮೇಲೆ ಇದ್ದರು. ಸುಧಾ ಬಂಕಾಪುರ ಸ್ವಾಗತಿಸಿದರು ಲಕ್ಷ್ಮಿ ಡಿ ನಿರೂಪಿಸಿದರು. ಪೂರ್ಣಿಮಾ ಡವಗಿ, ಅಸ್ಫಾಕ್ ಶಿಗ್ಗಾಂವಿ, ರೂಪ ಮಾಗೋಡ, ವಿಜಯಲಕ್ಷ್ಮಿ ಕೆ ಆರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.




