ಜೇನುಹುಳು ಕಡಿದು ಗಾಯಗೊಂಡಿದ್ದ ವೃದ್ಧೆ ಸಾನ್ನಪ್ಪಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸಿಂಗಾಪೂರ ಗ್ರಾಮದಲ್ಲಿ ನಡೆದಿದೆ.
ಜೇನುಹುಳು ಕಡಿದು ತೀವ್ರ ಗಾಯಗೊಂಡಿದ್ದ ನಿಂಗವ್ವ ಯಲ್ಲವ್ವ ಶಿರಬಡಗಿ(65) ಅವರು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.
ಸಿಂಗಾಪೂರ ಗ್ರಾಮದ ನಿವಾಸಿ ನಿಂಗವ್ವ ಅವರು ನವೆಂಬರ್ 13ರಂದು ಚೆಂಡು ಹೂವು ಬಿಡಿಸಲು ಹೊಲಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಜೇನು ಹುಳುಗಳು ಕಡಿದಿದ್ದವು. ತೀವ್ರ ಗಾಯಗೊಂಡು ಅಸ್ವಸ್ಥಗೊಂಡಿದ್ದ ನಿಂಗವ್ವ ಅವರನ್ನು ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸಾಮಾಜಿಕ ಸುಧಾರಣೆಗೆ ಕನಕದಾಸರಿಂದ ಸರಳ ಕೀರ್ತನೆಗಳ ರಚನೆ: ಶಾಸಕ ಸಿ ಪುಟ್ಟರಂಗಶೆಟ್ಟಿ
“ಜೇನುಹುಳು ಕಡಿದು ನಿಂಗವ್ವ ಮೃತಪಟ್ಟಿದ್ದಾರೆ. ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲವೆಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಬಂಕಾಪುರ ಪೊಲೀಸರು ತಿಳಿಸಿದ್ದಾರೆ.