ಸಕ್ಕರೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ನೀಡಿದ್ದ, ʼರೈತರು ಬರಗಾಲ ಬರಲಿ, ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡಲೆಂದು ಕಾಯುತ್ತಾರೆʼ ಎಂದು ನೀಡಿದ್ದ ಹೇಳಿಕೆಯಿಂದ ಮನನೊಂದು ತೀವ್ರ ಸಾಲದ ಕಾರಣ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಾಬ್ಳ ಗ್ರಾಮದ ನಿವಾಸಿ ರೈತ ಚಂದ್ರಪ್ಪ ಚನ್ನಾಪುರ ಎಂಬುವರು ಆತ್ಮಹತ್ಯೆಗೆ ಶರಣರಾಗಿರುವ ಘಟನೆ ನಡೆದಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾವಿ ತಾಲೂಕಿನ ಅಪೂರ್ ಕ್ಲಸ್ಟರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆದ ಬಳಿಕ ದಾವಾಖಾನೆ ಹೊರಗೆ ಶವದೊಂದಿಗೆ ಪ್ರತಿಭಟನೆ ನಡೆಸಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಘೋಷಣೆ ಕೂಗಿದರು.
ಶಿಗ್ಗಾವಿ ತಾಲೂಕು ತಹಶೀಲ್ದಾರ್ ಹಾಗೂ ಸಿಪಿಐ ಮಲಗುಂದ ಹಾಗೂ ಪಿಎಸ್ಐ ಬಂಕಾಪುರ ಮತ್ತು ಕಂದಾಯ ಇಲಾಖಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, “ಮೃತ ರೈತನ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆಂದು ಭರವಸೆ ನೀಡಿ. ಮುಂದೆ ಇಂತಹ ದುರ್ಘಟನೆ ನಡೆಯದಂತೆ ಜಿಲ್ಲಾಡಳಿತದಿಂದ ಜಾಗೃತಿ ವಹಿಸುತ್ತೇವೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ವಿದ್ಯಾರ್ಥಿ ಆತ್ಮಹತ್ಯೆ; ತನಿಖೆಗೆ ಎನ್‌ಎಸ್‌ಯುಐ ಆಗ್ರಹ
ಅಧಿಕಾರಿಗಳ ಭರವಸೆ ಬಳಿಕ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಈ ವೇಳೆ ರಾಜು ಪವಾರ್, ಸಂಗಮೇಶ್ ಪೀತಾಂಪುರ ಶೆಟ್ಟಿ, ಚೆನ್ನಪ್ಪ ಮರಡೂರ್, ಮುಲ್ಲಾ, ಭುವನೇಶ್ವರ್ ಶಿಡ್ಲಪುರ್, ಜಗದೀಶ್ ಬಳ್ಳಾರಿ, ಶೇಖಪ್ಪ ಹಲಸೂರ್, ಚೋನಪ್ಪ ಪೂಜಾರಿ, ಎಂ ಎನ್ ನಾಯಕ್, ಶಿವನಪ್ಪ ಪೂಜಾರಿ, ಮುತ್ತು ಗುಡ್ಡಿಗೇರಿ ಇದ್ದರು.