ದೌರ್ಜನ್ಯ ಜಾಗೃತಿ ಜಿಲ್ಲಾ ಸಮಿತಿ ಆಯ್ಕೆಯಲ್ಲಿ ಹೋರಾಟಗಾರರಿಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ಮೂಲಕ ಸಂಸದ ಬಸವರಾಜ ಬೊಮ್ಮಾಯಿ, ಪ್ರಲ್ಲಾದ ಜೋಶಿ ಅವರಗೆ ಡಿಎಸ್ ಎಸ್ ಮುಖಂಡ ಉಡಚಪ್ಪ ಮಾಳಗಿ ಮನವಿ ಮಾಡಿದರು.
“ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ದಲಿತ ದೌರ್ಜನ್ಯ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಕಳೆದ ಮೂರು ದಶಕದಿಂದ ಮಾಡಿಕೊಂಡು ಬಂದ ನನ್ನನ್ನು ನೇಮಕ ಮಾಡಿದೇ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅನ್ಯಾಯ ಮಾಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪ್ರಸಕ್ತ ಸಾಲಿನ ಎಸ್.ಸಿ.ಎಸ್ ಟಿ ವರ್ಗಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಸಮಿತಿಗೆ ನನ್ನನ್ನು ಪರಿಣಿಸಿಲು ಶಿಪಾರಸ್ಸು ಮಾಡುವಂತೆ” ಒತ್ತಾಯಿಸಿದ್ದಾರೆ.
“ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ನ್ಯಾಯ ಕೊಡಿಸುವಂತೆ” ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೊಹರಂ ಆಚರಣೆ; ಜು.5 ರಿಂದ ಮದ್ಯ ಮಾರಾಟ ನಿಷೇಧ
ಮನವಿ ಸಲ್ಲಿಸುವ ಸಮಯದಲ್ಲಿ ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಮಾಜಿ ಜಿ.ಪಂ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ನಾಗೇಂದ್ರ ಕಡಕೋಳ, ಕೆಎಂಎಪ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ ಸೇರಿದಂತೆ ಇತರರು ಇದ್ದರು.