ಹಾವೇರಿ ಜಿಲ್ಲೆಯ ತಡಸ ಗ್ರಾಮಕ್ಕೆ ಸಮರ್ಪಕ ಬಸ್ ಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಗಜಸೇನೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಬಳಿಕ ಸಾರಿಗೆ ಸಂಸ್ಥೆಯ ಅಧಿಕಾರಿ, ಡಿಪೋ ಮ್ಯಾನೇಜರ್ ಬಿ ಕೆ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಯಲ್ಲಿ ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ್ ಮಾತನಾಡಿ, “ಪ್ರತಿ ದಿನ ತಡಸದಿಂದ ಹುಬ್ಬಳ್ಳಿಗೆ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್ಸುಗಳನ್ನು ಸರಿಯಾದ ಸಮಯಕ್ಕೆ ಬಿಡಬೇಕು. ಜೊತೆಗೆ ಈಗಿರುವ ಎರಡು ಬಸ್ಸುಗಳನ್ನು ಕನಿಷ್ಠ 8 ರಿಂದ 10ಕ್ಕೆ ಹೆಚ್ಚಿಸಬೇಕು. ಗ್ರಾಮದ ಬಸ್ ನಿಲ್ದಾಣದಲ್ಲಿ ಆಸನಗಳು ಕಮ್ಮಿ ಇದ್ದು ಹೆಚ್ಚಿಸುವುದರ ಜೊತೆಗೆ ಶೌಚಾಲಯ, ಕಟ್ಟಡಕ್ಕೆ ಸುಣ್ಣ ಬಣ್ಣ ಇಲ್ಲದೆ ಬಿಕೋ ಕಳೆ ಕುದ್ದಿದ್ದು, ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
ಕರವೇ ಗಜಸೇನೆ ಜಿಲ್ಲಾ ಉಪಾಧ್ಯಕ್ಷ ಯೂಸುಫ್ ಸೈಕಲಗಾರ ಮಾತನಾಡಿ, “ಗ್ರಾಮಕ್ಕೆ ಸಮರ್ಪಕ ಬಸ್ಸಿನ ಸೌಲಭ್ಯ ಇರುವುದಿಲ್ಲ. ಇದರಿಂದ ಜನರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಕೂಡಲೇ ಬಸಗಳನ್ನು ಹೆಚ್ಚಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.

ಮನವಿಯನ್ನು ಸ್ವೀಕರಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿ ನಾಗರಾಜ್ ಅವರು ತಮ್ಮೆಲ್ಲಾ ಬೇಡಿಕೆಗಳನ್ನು ಕೇವಲ 8-10 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರವೇ ಗಜಸೇನೆಯ ಜಿಲ್ಲಾಧ್ಯಕ್ಷರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಠ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ ಹಿಂಡಸಗೇರಿ, ರಟ್ಟಿಹಳ್ಳಿ ತಾಲೂಕು ಯುವ ಘಟಕದ ಅಧ್ಯಕ್ಷ ಖಲಂದರ ಯಲದಳ್ಳಿ, ರಟ್ಟಿಹಳ್ಳಿ ತಾಲೂಕು ಉಪಾಧ್ಯಕ್ಷ ಇಮ್ರಾನ್, ರಟ್ಟಿಹಳ್ಳಿ ತಾಲೂಕು ಸಂಚಾಲಕ ಸನಾವುಲ್ಲಾ, ತಾಲೂಕಾ ಸಹ ಕಾರ್ಯದರ್ಶಿ ಪಾಝಿಲ್ ಪುರದಗೆರಿ, ಸದಸ್ಯರಾದ ರಿಝ್ವಾನ್ ಪುರದಗೇರಿ, ಶಿಗ್ಗಾಂವ್ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ತಡಸ ಗ್ರಾಮ ಘಟಕದ ಅಧ್ಯಕ್ಷ ದಾವಲಸಾಬ ಸಿಕಂದರ, ಶಿಗ್ಗಾಂವ್ ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣ ಸಿದ್ದಯ್ಯ ಹಿರೇಮಠ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
