“ವರದಾ-ಬೇಡ್ತಿ ನದಿ ಜೋಡಣೆಗೆ ಎಲ್ಲ ಜನಪ್ರತಿನಿದಿಗಳು ಒಟ್ಟುಗೂಡಿ ನೀರಿಗಾಗಿ ಒತ್ತಡ ತರಬೇಕು. ಎಲ್ಲರೂ ಒಂದಾಗಬೇಕು. ಈ ವಿಚಾರದಲ್ಲಿ ಯಾರು ವಿರೋಧಗಳಿಲ್ಲ. ಎಲ್ಲರೂ ಸೇರ್ತಾರೆ ಎಂಬ ಭರವಸೆ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸಕ್ಕೆ ಮುಂದಾಗೋಣ” ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಪಟ್ಟಣದ ಹುಕ್ಕೇರಿ ಮಠದ ಶಿವನುಭವ ಮಂಟಪದಲ್ಲಿ ವರದಾ ಬೇಡ್ತಿ ನದಿ ಜೋಡಣೆ ಕಾಮಗಾರಿ ಸಭೆಯಲ್ಲಿ ಮಾತನಾಡಿದರು.
“ನೀರು ಭಗವಂತ ಕೊಟ್ಟಿರುವ ವರ. ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪತಾಳಿ ಮತ್ತೆ ಪರಿಸದಲ್ಲಿಯೇ ಉಳಿಯುತ್ತದೆ. ನೀರು ಬದುಕಿನ ಜಿವಾಳ. ಜೊತೆ ಜೊತೆಗೆ ಆಧುನಿಕತೆ ಬೆಯುತ್ತಿದ್ದು, ನೀರು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನೀರಿನ ಉಪಯುಕ್ತ ಬಹಳ ಇದೆ.
ನೀರಿನ ನಿರ್ವಹನೆ ಮುಖ್ಯವಿದೆ. ನೀರಿನ ನಿರ್ವಹನೆಯಿಂದ ನದಿ ನಿರ್ವಹಣೆ ಮಾಡಬಹುದೇ. ನೀರಿನ ಮೂಲ ಬತ್ತಿ ಹೋಗುತ್ತಿದೆ. ನೀರನ್ನು ಅವಲಂಬಿಸಿದ ಪ್ರದೇಶಗಳು ರಾಣೇಬೆನ್ನೂರು, ಗದಗ ಶಿರಹಟ್ಟಿ ಹಾವೇರಿ ಇನ್ನೂ ಅನೇಕ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿವೆ” ಎಂದರು.
“ಪಶ್ಚಿಮದಲ್ಲಿಯೇ ಹುಟ್ಟಿ, ಪಶ್ಚಿಮದಲ್ಲಿ ಸಮುದ್ರಕ್ಕೆ ಸೇರುವ ನದಿಗಳು ನೈಸರ್ಗಿಕವಾಗಿ ಹರಿಯುವ ನದಿಯನ್ನು ನಾವು ಉಪಯೋಗ ಮಾಡಿಕೊಳ್ಳಬೇಕು. ಪರಿಸರ, ನಿಸರ್ಗ, ಅರಣ್ಯ ಉಳಿಸುವದು ಬಹಳ ಮುಖ್ಯವಿದೆ” ಎಂದರು.
“ವರದಾ ಬೇಡ್ತಿ ನದಿ ಜೋಡಣೆ ಬಹಳ ವರ್ಷಗಳಿಂದ ಬೇಡಿಕೆ ಇದೆ. ಸರಕಾರದ ಮಟ್ಟದಲ್ಲಿ ಯೋಜನೆಗಳು ಚರ್ಚೆ ಆದಾಗ ಸ್ವರೂಪ ಪಡೆದುಕೊಳ್ಳುತ್ತವೆ. ಸರಕಾರದ ಮಟ್ಟದಲ್ಲಿ ಚರ್ಚೆ ಆಗುವ ಹಾಗೆ ಮಾಡೋಣ. ಈ ನಡುವೆ ಅಡೆತಡೆಗಳು ಬರುತ್ತವೆ. ಅವುಗಳನ್ನು ದಾಟಿ ಮುಂದೇ ಹೋಗೋಣ. ಎಲ್ಲ ರೈತರು ಸೇರಿ ಯಶಸ್ವಿಗೊಳಿಸೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಪದ್ಮಲತಾ, ವೇದವಲ್ಲಿ, ಸೌಜನ್ಯ ಪ್ರಕರಣಗಳನ್ನು SIT ತನಿಖೆಗೊಳಪಡಿಸಲು ಎಸ್ಎಫ್ಐ ಒತ್ತಾಯ
ಸಭೆಯಲ್ಲಿ ಸದಾಶಿವ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೈತ ಸಂಘ ಮುಖಂಡರು ರಾಮಣ್ಣ ಕೆಂಚಳ್ಳೇರ, ಎ. ಎಸ್. ಬಳ್ಳಾರಿ, ಮಲ್ಲಿಕಾರ್ಜುನ ಬಳ್ಳಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.