ಹಾವೇರಿ | ನದಿ ಜೋಡಣೆಗೆ ಎಲ್ಲ ಜನಪ್ರತಿನಿದಿನಗಳು ಒಟ್ಟುಗೂಡಿ ಒತ್ತಡ ತರೋಣ: ಸಂಸದ ಬಸವರಾಜ ಬೊಮ್ಮಾಯಿ

Date:

“ವರದಾ-ಬೇಡ್ತಿ  ನದಿ ಜೋಡಣೆಗೆ ಎಲ್ಲ ಜನಪ್ರತಿನಿದಿಗಳು ಒಟ್ಟುಗೂಡಿ ನೀರಿಗಾಗಿ ಒತ್ತಡ ತರಬೇಕು.  ಎಲ್ಲರೂ ಒಂದಾಗಬೇಕು. ಈ ವಿಚಾರದಲ್ಲಿ ಯಾರು ವಿರೋಧಗಳಿಲ್ಲ. ಎಲ್ಲರೂ ಸೇರ್ತಾರೆ ಎಂಬ ಭರವಸೆ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸಕ್ಕೆ ಮುಂದಾಗೋಣ” ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

- Advertisement -

ಹಾವೇರಿ ಪಟ್ಟಣದ ಹುಕ್ಕೇರಿ ಮಠದ ಶಿವನುಭವ ಮಂಟಪದಲ್ಲಿ ವರದಾ ಬೇಡ್ತಿ ನದಿ ಜೋಡಣೆ ಕಾಮಗಾರಿ ಸಭೆಯಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ನೀರು ಭಗವಂತ ಕೊಟ್ಟಿರುವ ವರ. ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪತಾಳಿ ಮತ್ತೆ ಪರಿಸದಲ್ಲಿಯೇ ಉಳಿಯುತ್ತದೆ. ನೀರು ಬದುಕಿನ ಜಿವಾಳ. ಜೊತೆ ಜೊತೆಗೆ ಆಧುನಿಕತೆ ಬೆಯುತ್ತಿದ್ದು, ನೀರು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನೀರಿನ ಉಪಯುಕ್ತ ಬಹಳ ಇದೆ. 

ನೀರಿನ ನಿರ್ವಹನೆ ಮುಖ್ಯವಿದೆ. ನೀರಿನ ನಿರ್ವಹನೆಯಿಂದ ನದಿ ನಿರ್ವಹಣೆ ಮಾಡಬಹುದೇ. ನೀರಿನ ಮೂಲ ಬತ್ತಿ ಹೋಗುತ್ತಿದೆ. ನೀರನ್ನು ಅವಲಂಬಿಸಿದ ಪ್ರದೇಶಗಳು ರಾಣೇಬೆನ್ನೂರು, ಗದಗ ಶಿರಹಟ್ಟಿ ಹಾವೇರಿ ಇನ್ನೂ ಅನೇಕ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿವೆ” ಎಂದರು.

“ಪಶ್ಚಿಮದಲ್ಲಿಯೇ ಹುಟ್ಟಿ, ಪಶ್ಚಿಮದಲ್ಲಿ ಸಮುದ್ರಕ್ಕೆ ಸೇರುವ ನದಿಗಳು ನೈಸರ್ಗಿಕವಾಗಿ ಹರಿಯುವ ನದಿಯನ್ನು ನಾವು ಉಪಯೋಗ ಮಾಡಿಕೊಳ್ಳಬೇಕು. ಪರಿಸರ, ನಿಸರ್ಗ, ಅರಣ್ಯ ಉಳಿಸುವದು ಬಹಳ ಮುಖ್ಯವಿದೆ” ಎಂದರು.

“ವರದಾ ಬೇಡ್ತಿ ನದಿ ಜೋಡಣೆ ಬಹಳ ವರ್ಷಗಳಿಂದ ಬೇಡಿಕೆ ಇದೆ. ಸರಕಾರದ ಮಟ್ಟದಲ್ಲಿ ಯೋಜನೆಗಳು ಚರ್ಚೆ ಆದಾಗ ಸ್ವರೂಪ ಪಡೆದುಕೊಳ್ಳುತ್ತವೆ. ಸರಕಾರದ ಮಟ್ಟದಲ್ಲಿ ಚರ್ಚೆ ಆಗುವ ಹಾಗೆ ಮಾಡೋಣ. ಈ ನಡುವೆ ಅಡೆತಡೆಗಳು ಬರುತ್ತವೆ. ಅವುಗಳನ್ನು ದಾಟಿ ಮುಂದೇ ಹೋಗೋಣ. ಎಲ್ಲ ರೈತರು ಸೇರಿ ಯಶಸ್ವಿಗೊಳಿಸೋಣ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಪದ್ಮಲತಾ, ವೇದವಲ್ಲಿ, ಸೌಜನ್ಯ ಪ್ರಕರಣಗಳನ್ನು SIT ತನಿಖೆಗೊಳಪಡಿಸಲು ಎ‌ಸ್ಎಫ್ಐ ಒತ್ತಾಯ

ಸಭೆಯಲ್ಲಿ ಸದಾಶಿವ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೈತ ಸಂಘ ಮುಖಂಡರು ರಾಮಣ್ಣ ಕೆಂಚಳ್ಳೇರ, ಎ. ಎಸ್. ಬಳ್ಳಾರಿ, ಮಲ್ಲಿಕಾರ್ಜುನ ಬಳ್ಳಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...