ಎಸ್ಎಫ್ಐ ಭದ್ರ ಬುನಾದಿ ಸೈದ್ಧಾಂತಿಕ ನಿಲ್ಲುವ ಹೊಂದಿರುವ ಸಂಘಟನೆ. ಜೀವನ ಪರವಾಗಿ, ಜೀವ ಪರವಾಗಿ, ಸಮಾಜದ ಪರವಾಗಿ ಯಾವುದು ಕೆಲಸ ಮಾಡುತ್ತದೆ. ಅಂತಹ ಸಿದ್ಧಾಂತ ಇಟ್ಟುಕೊಂಡು ನೆಲ್ಲಗಟ್ಟಿನ ಮೇಲೆ ಹೋರಾಟ ಮಾಡುತ್ತಿರುವ ಎಸ್ಎಫ್ಐ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬರಬೇಕು ಎಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಹೇಳಿದರು.
ಸಾರ್ವತ್ರಿಕ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಸಾಮರಸ್ಯ, ಭಾವೈಕ್ಯತೆ ಮತ್ತು ಬಹುತ್ವ ಪರಂಪರೆಯ ಸಂರಕ್ಷಣೆಗಾಗಿ ಸರ್ಕಾರಿ ನೌಕರರ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಹಾವೇರಿ ಜಿಲ್ಲಾ ಸಮಿತಿ ಆಯೋಜಿಸಿದ 8ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ-ಯುವ ಜನರು ಕ್ರಾಂತಿಕಾರಿ ವಿಚಾರಗಳನ್ನು ಮೈಗೂಡಿಸಬೇಕು. ವೈಚಾರಿಕ ಶಿಕ್ಷಣ ಹೋರಾಟ ಜೊತೆ ಜೊತೆಗೆ ಸಾಗಬೇಕು. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ತಂದೆ ತಾಯಿಗಳ ಅಭಿಲಾಷ ಈಡೇರಿಸಬೇಕು, ಪಠ್ಯೇತರ ಚಟುವಟಿಕೆಗಳನ್ನು ಮಾಡಬೇಕು, ವೈಚಾರಿಕ ನಿಲುವುಗಳನ್ನು ಇಟ್ಟುಕೊಳ್ಳಬೇಕು. ವಿದ್ಯಾರ್ಥಿ-ಯುವಜನರ ದೇಶವನ್ನು, ಸಮಾಜವನ್ನು ನೋಡು ದೃಷ್ಟಿ ಕೋನ ಬೇರೆಯಾಗಿರುತ್ತದೆ. ಬಹಳಷ್ಟು ಬದಲಾವಣೆವಾಗಿ ಪ್ಪು ಸರಿಯೋ ಎಂಬ ವೈಚಾರಿಕ ನಿಲುವು ಬೆಳೆಯುತ್ತದೆ ಎಂದರು.
ಡಿವೈಎಫ್ಐ ಜಿಲ್ಲಾ ಸಂಚಾಲಕರು ನಾರಾಯಣ ಕಾಳೆ, ಸಮಾರೋಪ ಸಮಾರಂಭ ಉದ್ಘಾಟಿಸಿದರು. ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ, ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ, ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು: ನಾಲ್ವರ ಸಾವು
ವೇದಿಕೆಯಲ್ಲಿ ಶೃತಿ ಆರ್ ಎಮ್, ಕೀರ್ತನಾ ಹಿರಿಯಕ್ಕನವರ ಇದ್ದರು. ಎಸ್ಎಫ್ಐ ಮುಖಂಡರಾದ ದುರುಗಪ್ಪ ಯಮ್ಮಿಯವರ, ಸುಲೇಮಾನ್ ಮತ್ತಿಹಳ್ಳಿ, ದೇವರಾಜ ಅಕ್ಕಸಾಲಿ, ಅಣ್ಣಪ್ಪ ಕೊರವರ್, ಮುತ್ತುರಾಜ್ ದೊಡ್ಡಮನಿ, ವಿಜಯ ಶಿರಹಟ್ಟಿ, ಪ್ರಜ್ವಲ್ ಹರಿಜನ, ಮಹೇಶ್ ಮರೋಳ, ಪೂರ್ಣಿಮಾ ಡವಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಫಾತೀಮಾ ಶೇಖ್ ಸ್ವಾಗತಿಸಿದರು, ಲಲಿತಾ ಹಾವೇರ ಕಾರ್ಯಕ್ರಮ ನಿರೂಪಿಸಿದರು, ಸುಜಾತ ಕಮ್ಮಾರ ವಂದಿಸಿದರು.
