“ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಹಾಗೂ ದಲಿತ ಸಮುದಾಯದವರ ನಿರಂತರ ಹೋರಾಟದ ಫಲವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಮೀಸಲಾತಿ ಹಂಚಿಕೆ ಮಾಡಿರುವುದು ಹೆಮ್ಮೆಯ ವಿಷಯ. ಒಳಮೀಸಲಾತಿಗೆ ಶ್ರಮಿಸಿದವರಿಗೆ ಧನ್ಯವಾದ” ಎಂದು ದಲಿತ ಹೋರಾಟಗಾರ ಉಡಚಪ್ಪ ಮಾಳಗಿ ಅಭಿನಂದಿಸಿದರು.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, “ಒಳಮೀಸಲಾತಿಯ ಹಂಚಿಕೆ ಮಾಡಲು ಸಹಕಾರಿಯಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ರಾಜ್ಯ ಸರ್ಕಾರದ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ, ಶಾಸಕರಿಗೆ, ಒಳಮೀಸಲಾತಿಗೆ ಸಹಕಾರ ನೀಡಿದ ಎಲ್ಲಾ ವಕೀಲರಿಗೆ, ಮುಖಂಡರಿಗೆ ಸಮುದಾಯದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
“35 ವರ್ಷಗಳ ಕಾಲ ಒಳಮೀಸಲಾತಿಗಾಗಿ ಅನೇಕ ಧರಣಿ, ಹೋರಾಟ, ಪ್ರತಿಭಟನೆ, ಸತ್ಯಗ್ರಹ, ಪಾದಯಾತ್ರೆ, ಉಪವಾಸ ಸತ್ಯಗ್ರಹ, ಅರೆಬೆತ್ತಲೆ ಮೆರವಣೆಗೆ ಸೇರಿದಂತೆ ವಿವಿಧ ವಿಭಿನ್ನ ಹೋರಾಟವನ್ನು ಮಾಡುತ್ತಾ ಬರಲಾಗಿತ್ತು. ಸಾಮಾಜಿಕ ನ್ಯಾಯದಡಿ ಶೋಷಿತರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯದಲ್ಲಿ ಆಳ್ವಿಕೆ ಬರುವ ಎಲ್ಲಾ ಸರ್ಕಾರ ಬಂದಾಗಲೂ ನಿರಂತರವಾಗಿ ಹೋರಾಟ ಮಾಡಲಾಗಿತ್ತು. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಅಗಷ್ಟ್-01-2024 ರಂದು ಸುಪ್ರೀಂ ಕೋರ್ಟ ಪೂರಕವಾಗಿರುವ ತೀರ್ಪು ನೀಡಿ ಒಳಮೀಸಲಾತಿಗೆ ಸಹಕಾರಿಯಾಯಿತು” ಎಂದರು.
“ಒಳಮೀಸಲಾತಿ ಜಾರಿಗೆ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ರಾಜ್ಯದ ಮಠಾಧೀಶರಿಗೆ, ನೌಕರ ವರ್ಗದವರಿಗೆ, ಪತ್ರಿಕೆ ಮತ್ತು ಎಲ್ಲಾ ಮಾಧ್ಯಮ ಬಳಗದವರಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಷತೆಯನ್ನು ಸಲ್ಲಿಸುತ್ತೇವೆ. ರಾಜ್ಯದಲ್ಲಿನ ಎಲ್ಲಾ ಒಳಮೀಸಲಾತಿ ಹೋರಾಟಗಾರರಿಗೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ, ಜಿಲ್ಲೆ,ತಾಲ್ಲೂಕ ಹಾಗೂ ಗ್ರಾಮ ಸಂಘಟನೆಗಳಿಗೆ” ಅಭಿನಂದನೆಗಳನ್ನು ಸಲ್ಲಿಸಿದರು.