ಶಾಲೆಯಲ್ಲಿ ವಿದ್ಯಾರ್ಥಿನಿಗೆ ಅಸ್ಪೃಶ್ಯತೆ ಆಚರಣೆ ಮಾಡಿ ಮಗುವಿಗೆ ಮಾನಸಿಕ ಕಿರುಕುಳ ನೀಡಿದ್ದು ಖಂಡನೀಯ. ಕೂಡಲೇ ತಪ್ಪಿತಸ್ತರಿಗೆ ಕಾನೂನು ಕ್ರಮ ಜರುಗಿಸಬೇಕು” ಎಂದು ಡಾ. ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಫಕಿರೇಶ ಎಚ್ ಬಣಕಾರ ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ದೇವಿಹೊಸೂರು ಗ್ರಾಮದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಅಸ್ಪೃಶ್ಯತೆ ಆಚರಣೆ ಮಾಡಿರುವುದನ್ನು ಖಂಡಿಸಿ ಡಾ|| ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ ವತಿಯಿಂದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಅಸ್ಪೃಶ್ಯತೆ ಆಚರಣೆ ಮಾಡಿ, ಶಾಲಾ ವ್ಯವಸ್ಥೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದ ಅತಿಥಿ ಶಿಕ್ಷಕಿ ಮತ್ತು ಈ ಅಸ್ಪಶ್ಯತೆ ಆಚರಣೆಯನ್ನು ಮಾಡುವುದು ಗೊತ್ತಿದ್ದರೂ ಕ್ರಮ ಕೈಗೊಳ್ಳದ ಶಾಲೆಯ ಮುಖ್ಯ ಶಿಕ್ಷಕ ಉಳಿದ ಸಹ ಶಿಕ್ಷಕರು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ತಕ್ಷಣ ಆ ಶಾಲೆಯ ಅತಿಥಿ ಶಿಕ್ಷಕಿ ಮತ್ತು ಆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಇತರ ಶಿಕ್ಷಕರ ವಿರುದ್ದ ಎಪ್.ಐ.ಆರ್ ದಾಖಲು ಮಾಡಿ ಅವರ ವಿರುದ್ದ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪಕೀರೇಶ ಬಣಕಾರ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಬಂಕಾಪುರ ಕೇಂದ್ರ ಬಸ್ಸ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಕರವೇ ಗಜಸೇನೆ ಆಗ್ರಹ
ಮನವಿ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ ಜಿಲ್ಲಾ ಸಂಯೋಜಕ ಸುರೇಶ ಹಳ್ಳಳ್ಳಿ, ಮುಖಂಡರು ನವೀನ್ ಸಿದ್ದಮ್ಮನವರ, ಆನಂದ ವಡಕನ್ನವರ, ಹಣಮಂತ ಹಲಗೇರಿ, ಪ್ರವೀಣ ಕಟ್ಟಿಮನಿ, ಬಸವರಾಜ ತಡಸದ, ಅಶೋಕ್ ಹಳ್ಳಳ್ಳಿ, ಸಂಜು ತಳಗೇರಿ, ನೀಲಪ್ಪ ಮಾಳಗಿ, ಶಿವಣ್ಣ ಮಾದರ ಅನೇಕರು ಉಪಸ್ಥಿತರಿದ್ದರು.
