ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜಾತಿಗಳಿಂದ ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಒತ್ತಾಯಿಸಿದೆ.
ಹಾವೇರಿಯಲ್ಲಿ ದಸಂಸ ಮತ್ತು ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ “ದಲಿತ ಸಮುದಾಯಕ್ಕೆ ಮತಾಂತರ ಹೊಂದಿದವರಿಗೆ ಮೀಸಲಾತಿ ನೀಡಲೇಬೇಕು” ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ದಸಂಸ ಮುಖಂಡ ಉಡಚಪ್ಪ ಮಾಳಗಿ, “ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರ ಹೊಂದಿರುವ ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜನರಿಗೆ ಇವರಿಗೆ ಮೀಸಲಾತಿ ವಿಸ್ತರಣೆ ಕೋರಿರುವ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ವ್ಯಾಪಕ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಆಯೋಗ ರಚಿಸಿದೆ. ಈ ಸಮಯದಲ್ಲಿ, ದಲಿತ ಸಂಘಟನೆಗಳು ಮೀಸಲಾತಿ ವಿಸ್ತರಣೆ ಕುರಿತು ಸಮಗ್ರ ವರದಿಯನ್ನು ಆಯೋಗಕ್ಕೆ ನೀಡಬೇಕಿದೆ” ಎಂದರು.
ಸಭೆಯಲ್ಲಿ ದಸಂಸ ಮುಖಂಡ ಮಂಜಪ್ಪ ಮರೋಳ, ಎನ್.ಟಿ ಮಂಜುನಾಥ, ಮಂಜಪ್ಪ ಹರಪನಹಳ್ಳಿ, ಅಕ್ಕಮ್ಮ ಮರೋಳ, ಮಂಜಪ್ಪ ದೊಡ್ಡ ಕರಿಯಮ್ಮನವರ, ಮಹೇಶಣ್ಣಾ ಹರಿಜನ, ಹನುಮಂತ ಹೌಸಿ,ವಿಭೂತಿ ಶೆಟ್ಟಿ, ಹನುಮಂತಪ್ಪ ಸಿ.ಡಿ,ಅಡೆವೆಪ್ಪ ಬಿದರಕೊಪ್ಪ,ಮಾಲತೇಶ ಕರ್ಜಗಿ,ಮಲ್ಲೇಶ ಕರ್ಜಗಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರು ಹಾಜರಿದ್ದರು.