ಹಾವೇರಿ | ಪಟಾಕಿ ದುರಂತ; ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ಮಾಜಿ ಸಿಎಂ ಬೊಮ್ಮಾಯಿ

Date:

Advertisements

ಪಟಾಕಿಯಂತಹ ಸ್ಫೋಟಕ ವಸ್ತುಗಳ ಅವಘಡಗಳಲ್ಲಿ ಗಾಯಾಳುಗಳಿಗಿಂತ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ದುರಂತ ನಡೆದ ಗೋದಾಮಿಗೆ ಭೇಟಿ ನೀಡಿ ಘಟನೆಯಲ್ಲಿ ಸಾವನ್ನಪ್ಪಿದ ಕಾಟೇನಹಳ್ಳಿ ಗ್ರಾಮದ ಮೂವರು ಯುವಕರ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ ಬಳಿಕ ಮಾತನಾಡಿದರು.

“ಸ್ಪೋಟಕದಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ಸರಿಯಾದ ಪರಿಹಾರ ಸಿಗಬೇಕು. ರಾಣೆಬೆನ್ನೂರು ಸೇರಿದಂತೆ ಆಲದಕಟ್ಟಿಯಲ್ಲಾದ ಪಟಾಕಿ ಅವಘಡಗಳಿಗೆ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ” ಎಂದು ಆರೋಪಿಸಿದರು.

Advertisements

“ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿಯನ್ನು ನಿರ್ಭೀತಿಯಿಂದ ಪರವಾನಗಿ​ ಇಲ್ಲದೆ ದಾಸ್ತಾನು ಮಾಡಿದ್ದಾರೆ ಅಂದರೆ ಹೇಗೆ. ರಾಣೆಬೆನ್ನೂರು ಪ್ರಕರಣದಲ್ಲಿ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರ ನೀಡುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.

“ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ನಾನು ಹೇಳಿದಾಗ ಕೃಷಿ ಸಚಿವರು ಒಪ್ಪಲಿಲ್ಲ. ಈ ಕುರಿತಂತೆ ದಾಖಲಾತಿಗಳಿವೆ ಎಂದರೂ ಒಪ್ಪಲಿಲ್ಲ. ಈ ಕುರಿತಂತೆ ಸಚಿವ ಶಿವಾನಂದ ಪಾಟೀಲ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ರೈತ ವಿರೋಧಿ ಮತ್ತು ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಕಿಡಿಕಾರಿದರು.

“ರೈತ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಈಗ ಒಪ್ಪುತ್ತಿದೆ. ಹಿಂದೆ ಎಫ್​ಎಸ್​ಎಲ್ ರಿಪೋರ್ಟ್ ಬರಲು ತಡವಾಗುತ್ತಿದ್ದು, ಈಗ 15 ದಿನದಲ್ಲಿ ರಿಪೋರ್ಟ್ ಬರುತ್ತಿದೆ. ಅಧಿಕಾರಿಗಳು ರೈತ ಆತ್ಮಹತ್ಯೆಯಾದಾಗ ಕೇವಲ ಬ್ಯಾಂಕಿನಲ್ಲಿ ಸಾಲ ಮಾಡಿರುವುದನ್ನು ಮಾತ್ರ ಪರಿಗಣಿಸುತ್ತಾರೆ. ಕೆಲ ರೈತರಿಗೆ ಬ್ಯಾಂಕ್​ ಸಹ ಸಾಲ ನೀಡಿರುವುದಿಲ್ಲ. ಖಾಸಗಿಯಾಗಿ ಮೀಟರ್ ಬಡ್ಡಿಯಲ್ಲಿ ರೈತರು ಸಾಲ ಮಾಡಿರುತ್ತಾರೆ. ಅದನ್ನೂ ಕೂಡ ಅಧಿಕಾರಿಗಳು ಪರಿಗಣಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೆಂಕಿ ಅವಘಡ; ಭಾರೀ ಅನಾಹುತ

ರಾಜ್ಯದಲ್ಲಿ ರೈತ ಆತ್ಮಹತ್ಯೆಗಳಲ್ಲಿ ಸಕಾರಣವಿಲ್ಲದೇ ಸರ್ಕಾರ ಪರಿಹಾರ ನೀಡಲು ಮುಂದಾಗದಿದ್ದರೇ ಅದರ ಬಗ್ಗೆ ಮಾಹಿತಿ ಕಲೆ ಹಾಕಿ ಬಿಜೆಪಿಯ ತಾಲೂಕು ನಾಯಕರೇ ಆರ್ಥಿಕ ಸಹಾಯ ಮಾಡಲಿದ್ದಾರೆ. ಈ ಕುರಿತಂತೆ ಬಿಜೆಪಿಯಿಂದ ರಾಜ್ಯಮಟ್ಟದ ನಿರ್ಣಯವನ್ನು ಶೀಘ್ರದಲ್ಲಿಯೇ ತಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

ಕಳೆದ ತಿಂಗಳು ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದರು.

ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದವು. ಮೃತರನ್ನು ದ್ಯಾಮಪ್ಪ ಓಲೇಕಾರ(25), ರಮೇಶ್ ಬಾರ್ಕಿ(28) ಮತ್ತು ಶಿವಲಿಂಗ ಅಕ್ಕಿ(22) ಎಂದು ಗುರುತಿಸಿದ್ದು, ಮೃತರು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಕಟ್ಟಡ ಕಾರ್ಮಿಕರ ಸೌಲಭ್ಯ ಸಿಗುವಲ್ಲಿ  ಮದ್ಯವರ್ತಿಗಳ ಹಾವಳಿ ತಡೆಗಟ್ಟಲು ಕರವೇ ಸ್ವಾಭಿಮಾನಿ ಬಣ ಒತ್ತಾಯ

"ಹಾವೇರಿ ಜಿಲ್ಲಾದ್ಯಂತ ಸರ್ಕಾರದಿಂದ ಪರವಾನಿಗೆ ಪಡೆದ ಕಲವೊಂದು ಕಟ್ಟಡ ಮತ್ತು ಇತರೆ...

ಹಾವೇರಿ | ಆ.16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲೇಬೇಕು: ಉಡಚಪ್ಪ ಮಾಳಗಿ

ರಾಜ್ಯ ಸರ್ಕಾರವು ಆಗಸ್ಟ್ 16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲೇಬೇಕು. ಈ...

ಹಾವೇರಿ | ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಿಗಬೇಕು: ಕರವೇ ಸ್ವಾಭಿಮಾನಿ ಬಣ

ಹಾವೇರಿ ಜಿಲ್ಲಾದ್ಯಂತ ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಮರ್ಪಕವಾಗಿ ಸಿಗಬೇಕಾದಲ್ಲಿ...

ಮಳೆ | ಹಾವೇರಿ ಗದಗ ಸೇರಿದಂತೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಗದಗ ಹಾವೇರಿ ಸೇರಿದಂತೆ ರಾಜ್ಯದ ೧೭ ಜಿಲ್ಲೆಗಳಲ್ಲಿ ಆಗಸ್ಟ್? ೧೭ರ ವರೆಗೂ...

Download Eedina App Android / iOS

X