ಏಷ್ಯಾ ಕಪ್ | ಟಾಸ್‌ ಗೆದ್ದ ಪಾಕಿಸ್ತಾನ; ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ

Date:

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್‌-4 ಹಂತದ ಹೈವೋಲ್ಟೇಜ್​​ ಹಣಾಹಣಿಗೆ (ಸೆ.10) ಕೊಲೊಂಬೊದ ಆರ್ ಪ್ರೇಮದಾಸ ಮೈದಾನ ಸಜ್ಜುಗೊಂಡಿದೆ. ಸೆ.2ರಂದು ನಡೆದಿದ್ದ ಲೀಗ್‌ ಹಂತದ ಮೊದಲ ಪಂದ್ಯ ರದ್ದಾಗಿತ್ತು. ಹೀಗಾಗಿ 2ನೇ ಪಂದ್ಯವು ಹೆಚ್ಚಿನ ರೋಚಕತೆ ಪಡೆದುಕೊಂಡಿದೆ.

ಟಾಸ್‌ ಗೆದ್ದ ಪಾಕಿಸ್ತಾನ ತಂಡದ ಬಾಬರ್ ಅಜಮ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ಎರಡೂ ತಂಡಗಳೂ ಫೈನಲ್‌ ಹಾದಿಯಲ್ಲಿ ಅತ್ಯಗತ್ಯ ಗೆಲುವಿನ ನಿರೀಕ್ಷೆಯಲ್ಲಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಪಾಕ್‌ ಈಗಾಗಲೇ ಸೂಪರ್‌-4ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದು, ಮತ್ತೊಂದು ಜಯವು ತಂಡವನ್ನು ಫೈನಲ್‌ಗೆ ಕರೆದೊಯ್ಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ. ನೇಪಾಳ ವಿರುದ್ಧ ಬ್ಯಾಟಿಂಗ್​​ನಲ್ಲಿ ಭರ್ಜರಿ ಪ್ರದರ್ಶನ ಕೊಟ್ಟರೂ ಬೌಲಿಂಗ್​​​ನಲ್ಲಿ ತನ್ನ ಖ್ಯಾತಿ, ಅನುಭವಕ್ಕೆ ತಕ್ಕಂತೆ ಆಡಲಿಲ್ಲ ಎಂಬುದು ಬೇಸರದ ಸಂಗತಿ. ನಮ್ಮ ಬೌಲರ್​​ಗಳಿಗೆ ನೇಪಾಳಿ ಬ್ಯಾಟರ್‌ಗಳು​ ಸುಲಭವಾಗಿ ರನ್​ ಗಳಿಸಿದ್ದು ಅಚ್ಚರಿ ಮೂಡಿಸಿತ್ತು. ಫೀಲ್ಡಿಂಗ್‌ ಕಳಪೆಯಾಗಿತ್ತು.

ಏಷ್ಯಾ ಕಪ್ ಲೀಗ್​​​ ಹಂತದಲ್ಲಿ ಪಾಕಿಸ್ತಾನ​ ವಿರುದ್ಧ ಭಾರತದ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದರು. ರೋಹಿತ್​ ಶರ್ಮಾ, ಶುಭಮನ್‌ ಗಿಲ್, ವಿರಾಟ್ ಕೊಹ್ಲಿ​ ನಿರಾಸೆ ಮೂಡಿಸಿದ್ದರು. ನೇಪಾಳ ಎದುರು ಗಿಲ್-ರೋಹಿತ್ ಲಯಕ್ಕೆ ಮರಳಿದರೂ ಪಾಕಿಸ್ತಾನ​ ವಿರುದ್ಧ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇಶಾನ್, ಹಾರ್ದಿಕ್, ಜಡೇಜಾ ಭರ್ಜರಿ ಫಾರ್ಮ್​​ನಲ್ಲಿರುವುದು ಕೊಂಚ ಸಮಾಧಾನದ ಸಂಗತಿ.

ಇದೀಗ ಭಾರತ ತಂಡ ನಿಜವಾದ ಸವಾಲು ಪಾಕಿಸ್ತಾನದ ಎದುರು ಶುರುವಾಗಲಿದೆ. ಕೆ.ಎಲ್‌ ರಾಹುಲ್ ಅವರು ಸಂಪೂರ್ಣ ಫಿಟ್‌ ಆಗಿ ತಂಡಕ್ಕೆ ಮರಳಿದ್ದಾರೆ. ನೇಪಾಳ ಪಂದ್ಯಕ್ಕೆ ವಿರಾಮ ಪಡೆದಿದ್ದ ಜಸ್‌ಪ್ರೀತ್‌ ಪಾಕಿಸ್ತಾನ ವಿರುದ್ಧದ ಪಂದ್ಯದ ಆಯ್ಕೆಗೆ ಲಭ್ಯರಾಗಿದ್ದಾರೆ.

ಪಾಕಿಸ್ತಾನ ವಿರುದ್ಧ ಬೌಲಿಂಗ್​ ಪ್ರದರ್ಶನ ಕಾಣಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯ ಬೌಲಿಂಗ್​​​ನಲ್ಲಿ ಲಯಕ್ಕೆ ಮರಳಬೇಕಿದೆ. ಸಿರಾಜ್ ಮೂರು ವಿಕೆಟ್ ಪಡೆದರೂ 60 ರನ್​ ಕೊಟ್ಟಿದ್ದರು. ಮತ್ತೊಂದೆಡೆ ಕುಲ್ದೀಪ್ ಯಾದವ್ ಅವರ ಸ್ಪಿನ್​ ಮೋಡಿ ನಡೆಯುತ್ತಿಲ್ಲ. ಹಾಗಾಗಿ ತಂಡವು ಮತ್ತಷ್ಟು ಕಸರತ್ತು ನಡೆಸುವುದು ಅನಿವಾರ್ಯ.

ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಹಾಳು ಮಾಡಲು ಭ್ರಷ್ಟ ಜಯ್‌ ಶಾ ಸಾಕು ಎಂದಿದ್ದ ಮಾಜಿ ಕ್ರಿಕೆಟಿಗ ವೆಂಕಿ: ಕೆಲವೇ ನಿಮಿಷದಲ್ಲಿ ಪೋಸ್ಟ್‌ ಡಿಲೀಟ್!

ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್​ 1 ತಂಡ ಪಾಕಿಸ್ತಾನ ತಂಡವು ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್​ನಲ್ಲಿ ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಇವರನ್ನು ಸುಲಭಕ್ಕೆ ಕಟ್ಟಿ ಹಾಕುವುದು ಸುಲಭವಲ್ಲ. ಪ್ರತಿ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಆದ ಕಾರಣ ಭಾರತ ಎಚ್ಚರಿಕೆಯಿಂದ ಆಟವಾಡಬೇಕಿದೆ.

ಉಭಯ ತಂಡಗಳ 11ರ ಬಳಗ

ಭಾರತ:

ಕೆ ಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬೂಮ್ರಾ,ಶಾರ್ದೂಲ್‌ ಠಾಕೂರ್.

ಪಾಕಿಸ್ತಾನ:

ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರವೂಫ್.

ಭಾರತ-ಪಾಕಿಸ್ತಾನ ಮುಖಾಮುಖಿ

ಒಟ್ಟು ಪಂದ್ಯಗಳು- 133

ಭಾರತ – 55

ಪಾಕಿಸ್ತಾನ – 73

ಫಲಿತಾಂಶವಿಲ್ಲ – 5

ಪಂದ್ಯದ ಸಮಯ: ಮಧ್ಯಾಹ್ನ 3:00 ಗಂಟೆಗೆ

ನೇರ ಪ್ರಸಾರ

ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ ಫೈನಲ್ | ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾರಕ ಬೌಲಿಂಗ್‌ಗೆ ಮಕಾಡೆ ಮಲಗಿದ ಹೈದರಾಬಾದ್!

ಐಪಿಎಲ್‌ನ ಲೀಗ್ ಹಂತದಲ್ಲಿ ಭರ್ಜರಿ ಸ್ಫೋಟಕ ಬ್ಯಾಟಿಂಗ್‌ನ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಪ್ಯಾಟ್...

ಟಿ20 ವಿಶ್ವಕಪ್ | ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಅಮೆರಿಕಕ್ಕೆ ಹಾರಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್

ಜೂನ್ 2ರಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ...

ಅವಕಾಶ ಕೈಚೆಲ್ಲಿದ ರಾಜಸ್ಥಾನ ಸ್ಪಿನ್ ಮೋಡಿಗೆ ‘ಬಲಿ’ : ಫೈನಲ್‌ಗೆ ಲಗ್ಗೆ ಇಟ್ಟ ಸನ್‌ರೈಸರ್ಸ್‌ ಹೈದರಾಬಾದ್

ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಬಳಗ...