ಹುಡುಗಿ ಸಿಗದ ಹಿಂದೂಗಳು ಅನ್ಯಧರ್ಮದ ಯುವತಿಯರನ್ನು ಮದುವೆಯಾಗಿ ಘರ್ ವಾಪ್ಸಿ ಮಾಡಿ: ಸೂಲಿಬೆಲೆ

Date:

Advertisements

“ಹಿಂದೂಗಳು ಮತಾಂತರ, ಲವ್ ಜಿಹಾದ್ ವಿಚಾರಗಳನ್ನ ಬಿಟ್ಟು ಬಿಡಬೇಕು. ಮತಾಂತರವಾದವರನ್ನ ಮತ್ತೆ ಘರ್ ವಾಪ್ಸಿ ಹೇಗೆ ಮಾಡಬೇಕು ಎಂಬ ಬಗ್ಗೆ ಹಿಂದೂ ಯುವಕರನ್ನ ತರಬೇತುಗೊಳಿಸಬೇಕು. ಹುಡುಗಿ ಸಿಕ್ಕಿಲ್ಲವೆನ್ನುವ ಹಿಂದೂ ಯುವಕರು ಅನ್ಯ ಧರ್ಮೀಯ ಹುಡುಗಿಯರನ್ನ ಪ್ರೀತಿಸಿ ಮದುವೆಯಾಗಿ, ಘರ್ ವಾಪ್ಸಿ ಮಾಡಬೇಕು” ಎಂದು ಸಂಘಪರಿವಾರದ ಮುಖಂಡ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ನಡೆಯಿತು.

ಕುತ್ತಾರಿನಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, “ಹಿಂದೂ ಸಮಾಜಕ್ಕೆ ಎದುರಾಗಿರುವ ಸಮಸ್ಯೆಗಳಿಂದ ಪಾರು ಮಾಡಬಲ್ಲ ಏಕೈಕ ಶಕ್ತಿಯೇ ನಮ್ಮೊಳಗಿನ ಶ್ರದ್ದೆಯಾಗಿದೆ. ಮತಾಂತರ, ಲವ್ ಜಿಹಾದ್ ವಿಚಾರಗಳನ್ನ ಬಿಟ್ಟು ಬಿಡಿ. ಮತಾಂತರವಾದವರನ್ನ ಮತ್ತೆ ಘರ್ ವಾಪಸಿ ಹೇಗೆ ಮಾಡೋದಂತ ನಮ್ಮ ಯುವಕರನ್ನ ತರಬೇತುಗೊಳಿಸಿ. ಹುಡುಗಿ ಸಿಕ್ಕಿಲ್ಲವೆನ್ನುವ ಹಿಂದೂ ಯುವಕರು ಅನ್ಯ ಧರ್ಮೀಯ ಹುಡುಗಿಯರನ್ನ ಪ್ರೀತಿಸಿ ಮದುವೆಯಾಗಿ. ಸವಾಲುಗಳನ್ನ ಎದುರಿಸಬೇಕೆಂದರೆ ಇನ್ನು ಅಗ್ರೆಸಿವ್ ಆಗಿ ಹೋದರೆ ಸಾಲದು. ಟೆಸ್ಟ್ ಮ್ಯಾಚ್ ನಿಂತೋಗಿದೆ, ಇರೋದೇ ಇಪ್ಪತ್ತು ಓವ‌ರ್, ಅದರಲ್ಲಿ ಬಡಿಯಬೇಕಷ್ಟೆ” ಎಂದು ಹೇಳಿಕೆ ನೀಡಿದ್ದಾರೆ.

Advertisements

ರಾಜ್ಯದಲ್ಲಿ ಹಿಂದೂಗಳ ಕುರಿತು ತರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಲು ಪರೀಕ್ಷೆ ಬರೆಯುವ ಶುಲ್ಕದ ಶೇ 50ರಷ್ಟನ್ನು ಮರುಪಾವತಿ ಮಾಡಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ನಡೆಸಲು ₹ 25 ರಿಂದ 30 ಲಕ್ಷವನ್ನು ಮುಸ್ಲಿಂ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಏನೂ ಇಲ್ಲದಂತಾಗಿದೆ. ಹಿಂದುತ್ವವವನ್ನ ಗೌರವಿಸುವ ವ್ಯಕ್ತಿಗಳು ನಾಡನ್ನು ಆಳಿದರೆ ಮಾತ್ರ ಹಿಂದೂ ಧರ್ಮ ಸುದೀರ್ಘವಾಗಿ ಬಾಳುತ್ತದೆ ಎಂದು ತಿಳಿಸಿದ್ದಾರೆ.

‘2013ಲ್ಲಿ ಪವಿತ್ರ ಕುಂಭ ಮೇಳದ ಉಸ್ತುವಾರಿಯನ್ನಾಗಿ ಅಂದಿನ ಸರ್ಕಾರ ಅಝಮ್ ಖಾನ್ ಅವರನ್ನು ನೇಮಿಸಿತ್ತು. ಆಗಿನ ಉಸ್ತುವಾರಿಗಿಂತ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉಸ್ತುವಾರಿಯಲ್ಲಿ ನಡೆದ ಕುಂಭಮೇಳ ಅತ್ಯಂತ ಯಶಸ್ವಿಯಾಯಿತು. ಕುಂಭ ಮೇಳವನ್ನು ಹೇಗೆ ನಡೆಸಬಹುದು ಎಂದು ಯೋಗಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾದೇಶದ ಪ್ರಭಾವಕ್ಕೊಳಗಾಗಿ ಇಡೀ ಅಸ್ಸಾಮನ್ನು ಭಾರತ ಕಳಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಆದರೆ ಅಸ್ಸಾಮಲ್ಲಿ ಹಿಂದೂ ಪರ ಆಡಳಿತ ಬಂದ ಮೇಲೆ ಬಾಂಗ್ಲಾದೇಶದ ನುಸಳುಕೋರರನ್ನ ಹುಡುಕಿ ಹೊರದಬ್ಬುವ ಕಾರ್ಯ ಪ್ರಖರವಾಗಿ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಹಿಂದೂಗಳು ಬದುಕಲು ಕಷ್ಟಕರ ಸ್ಥಿತಿಯಿದ್ದು, ಆ ರಾಜ್ಯವನ್ನ ನಾವು ಕಳಕೊಳ್ಳುವ ಭೀತಿ ಎದುರಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, “ದೇಶದಲ್ಲಿ 125 ಕೋಟಿ ಹಿಂದೂಗಳಿದ್ದರೂ ಪ್ರತಿನಿತ್ಯ ಸರಾಸರಿಯಲ್ಲಿ ನಮ್ಮ ಜನಸಂಖ್ಯೆ ಕಡಿಮೆಯಾಗುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಿಂದೂಗಳ ಸಂಖ್ಯೆ 65 ಶೇಕಡಾಕ್ಕೆ ಇಳಿದಿದೆ. ಹಿಂದೂ ಯುವಕ, ಯುವತಿಯರು ವಯಸ್ಸು 35 ಆದರೂ ಮದುವೆ ಆಗಲ್ಲ. ಮದುವೆಯಾದರೂ ಮಕ್ಕಳು ಮಾಡಲು ವಿಳಂಬ ಪೃವೃತ್ತಿಯೇ ನಮ್ಮ ಜನಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನು ಓದಿದ್ದೀರಾ? ಸದ್ಯಕ್ಕಂತೂ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲ್ಲ: ವದಂತಿಗಳಿಗೆ ಸ್ಪಷ್ಟ ತೆರೆ ಎಳೆದ ರೋಹಿತ್ ಶರ್ಮಾ

“ಹಿಂದೂ ಯುವಕ, ಯುವತಿಯರು ಇಪ್ಪತ್ತೈದು, ಮೂವತ್ತು ವರುಷದ ಒಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳು ಪಡೆಯುವಂತೆ ಜನಜಾಗೃತಿಗೊಳಿಸಬೇಕು. ಇಡೀ ರಾಷ್ಟ್ರದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಗೊಳ್ಳಲು ಪ್ರಬಲ ಕಾನೂನು ಜಾರಿಯಾಗಬೇಕೆಂದು ಪ್ರಯಾಗ್ ರಾಜ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬೈಠಕ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಹಿಂದು ಧಮ೯ದಲ್ಲಿ ಇರುವ ಹಿಂದುಳಿದ ವರ್ಗಗಳ ಅಂದರೆ ಎಸ್ಸಿ ಎಸ್ಟಿ ಅಥವಾ ಹಿಂದುಳಿದ ಸಮುದಾಯಗಳಲ್ಲಿಯೂ ಕನ್ಯೆ ಸಿಗುತ್ತಿಲ್ಲ ಹಾಗಾಗಿ ಬ್ರಾಹ್ಮಣರಲ್ಲಿಯ ಹೆಂಗಸರನ್ನು ಪ್ರೀತಿಸಿ ಮದುವೆ ಆಗಬಹುದೆ ಸುಲಿ ಬೆಲೆ ಚಕ್ರವರ್ತಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X