ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಉಡುಪಿ ಜಿಲ್ಲೆಯ ಮಹಿಳಾ ವಿಭಾಗದ ಸ್ವಯಂಸೇವಕಿಯರು ಹೂಡೆಯ ಗುಜ್ಜರ್ ಬೆಟ್ಟುವಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದರು.
ಇತ್ತೀಚೆಗೆ ಹಾಸನ ಜಿಲ್ಲೆಯ ಮನ್ಸೂರಾದಲ್ಲಿ ನಡೆದ ಎರಡು ದಿನಗಳ ರಾಜ್ಯ ಸ್ವಯಂಸೇವಕರ ಸಮ್ಮೇಳನದಲ್ಲಿ ಭಾಗವಹಿಸಿ ಪ್ರೇರಣೆ ಪಡೆದಿದ್ದು, ಅದರಂತೆ ರಸ್ತೆ ಬದಿಗಳಲ್ಲಿ ಹರಡಿದ್ದ ಕಸವನ್ನು ಹೆಕ್ಕಿ ತೆಗೆದು ಶುಚಿಗೊಳಿಸಲಾಗಿದೆ ಎಂದು ತಂಡದ ಪ್ರಮುಖರಾದ ಕುಲ್ಸೂಮ್ ಅಬೂಬಕ್ಕರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂ ಪಂಚಾಯತ್ ಮುಖಂಡರು ಮತ್ತು ಎಸ್‌ಎಲ್‌ಆರ್‌ಎಂ ಘಟಕದವರು ಸ್ಥಳಕ್ಕೆ ಆಗಮಿಸಿದರು. ಇನ್ನು ಮುಂದೆ ಕಸವನ್ನು ರಸ್ತೆಬದಿ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸಿ.ಸಿ.ಕ್ಯಾಮರವನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು. ಈ ವೇಳೆ ಗ್ರಾಪಂ ಸದಸ್ಯೆ ಜಮೀಲ, ಸದೀದ ಮೊದಲಾದವರು ಉಪಸ್ಥಿತರಿದ್ದರು.
