ಪೌರಕಾರ್ಮಿಕರು ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 7ರಂದು ಮಧ್ಯಾಹ್ನ ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಬರುವ ಮೇ. 11ರಂದು ರವಿವಾರ, 127 ಜನ ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಪಾಲಿಕೆ ಕಚೇರಿಗೆ ಮುತ್ತಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಾಲಿಕೆಯ 933 ನೇರ ವೇತನ ಪೌರಕಾರ್ಮಿಕರಿಗೆ 4 ತಿಂಗಳು ಸಂಕಷ್ಟ ಬತ್ತೆ ಪಾವತಿಸಿದ್ದೇವೆ. ಅಲ್ಲದೇ 251 ನೇರ ವೇತನ ಪೌರಕಾರ್ಮಿಕರಿಗೆ 5 ತಿಂಗಳು ಸಂಕಷ್ಟ ಬತ್ತೆ ರೂ 5 ಲಕ್ಷ ಪಾವತಿಸಿದ್ದೇವೆ. ಅಲ್ಲದೇ 3 ದಿನಗಳಲ್ಲಿ ಪೌರಕಾರ್ಮಿಕರಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ನೀಡಲಾಗುವುದು. ಸದ್ಯದಲ್ಲೇ ಪೌರಕಾರ್ಮಿಕರ ಸಂಘದ ಸಭೆ ಕರೆದು ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಹಿಂದೂಗಳ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ: ಸಚಿವ ಆರ್.ಬಿ.ತಿಮ್ಮಾಪುರ
ಈ ಸಂದರ್ಭದಲ್ಲಿ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ.ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಅನಿತಾ ಈನಗೊಂಡ, ಗಾಳೆಪ್ಪ ದ್ವಾಸಲಕೇರಿ, ದತಪ್ಪ ಆಪುಸಪೇಟ್, ಕನಕಪ್ಪ ಕೋಟಬಾಗಿ, ಲಕ್ಷ್ಮೀ ಬೇತಾಪಲ್ಲಿ ಪಾರವ್ವ ಹೊಸಮನಿ ಭಾಗ್ಯಲಕ್ಷ್ಮೀ ಮಾದರ, ಎಸ್ಟುರೆಮ್ಮ ಭಂಡಾರಿ, ಮಹೇಶ ಮಾದರ, ತಾಯಪ್ಪ ಕಣೆಕಲ್, ಶರೀಫ್ ಮಸರಕಲ್ ನಾಗರಾಜ್ ದೊಡ್ಡಮನಿ, ಶಿವಮ್ಮ ಬೇವಿನಮರದ, ವೆಂಕಟೇಶ್ ಪಾಲವಾಯಿ, ಪದ್ಮಾ ಚಿಕ್ಕಣ್ಣವರ, ಪ್ರಶಾಂತ್ ಶಿಕ್ಕಲಗಾರ, ರಮೇಶ ಗೊಲ್ಲರ, ಶಾಂತವ್ವ ಚುರಮುರಿ, ದುರಗಮ್ಮ ಗೊಲ್ಲರ ಇದ್ದರು.