ಬಸವಣ್ಣನವರ ಬಾಲ್ಯದ ಸಂದರ್ಭದಲ್ಲಿ ತಾಂಡವವಾಡುತ್ತಿದ್ದ ವರ್ಗ, ವರ್ಣ, ಜಾತೀಯತೆ ಮೇಲು-ಕೀಳುಗಳ ಆಚರಣೆಗಳನ್ನು ಬದಿಗೆ ಸೇರಿಸಿ ಸರ್ವ ಸಮಾನತೆ ಸಾರುವ ಇಷ್ಟಲಿಂಗವನ್ನು ಪ್ರಧಾನ ಮಾಡಿ ಹೆಮ್ಮೆಯಿಂದ ಲಿಂಗಾಯತರೆಂದು ಹೇಳಿಕೊಳ್ಳುವ ನವಸಮಾಜವೊಂದನ್ನು ಹುಟ್ಟು ಹಾಕಿದರು. ಹೀಗಾಗಿ ಲಿಂಗಾಯತರು ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಬೇಕಿದೆ ಎಂದು ರಾಷ್ಟ್ರೀಯ ಬಸವದಳದ ಸಂಘಟನಾ ಕಾರ್ಯದರ್ಶಿ ಗಂಗಾಧರ ದೊಡ್ಡವಾಡ ಹೇಳಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಬಸವ ಜಯಂತಿ ಉತ್ಸವದ ಅಂಗವಾಗಿ ಬಸವ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೆಯ ಶತಮಾನದಲ್ಲಿ ಕೆಲವು ಕಿಡಿಗೇಡಿಗಳು ಬಸವಣ್ಣನವರ ಸಮಾಜಮುಖಿ ಚಿಂತನೆಗಳನ್ನು ವಿರೋಧಿಸಿದ್ದರು. ಅಂದಿನಂತೆ ಇಂದಿಗೂ ಬಸವತತ್ವ ವಿರೋಧಿಸುವ ಕೆಲವು ಅವಿಚಾರಿಗಳು ಬಸವಣ್ಣನವರ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಲಿಂಗಾಯತರು ಜಾಗೃತರಾಗಿ, ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಿ ಐಕ್ಯತೆ ಸ್ಥಾಪಿಸಿಕೊಂಡರೆ ವಿಶ್ವಮಟ್ಟದಲ್ಲಿ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿ ಮಾನ್ಯತೆ ಪಡೆಯಬಹುದು ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಏ. 30 ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ
ಸಮಾರಂಭದ ಸಾನಿಧ್ಯವನ್ನು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ವಹಿಸಿದ್ದರು. ವೀರಣ್ಣಾ ಕಲ್ಲೂರ, ತಾರಾದೇವಿ ವಾಲಿ, ಬಸವ ಸಮಿತಿ ಅಧ್ಯಕ್ಷೆ ಸರೋಜಾ ಹೂಗಾರ, ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಬಸದ, ಎಂ ಎಸ್ ಶಿರಗಣ್ಣವರ, ನವೀನ ಕುದರಿ, ಚನ್ನಬಸು ಧಾರವಾಡಶೆಟ್ಟರ, ಅಂದಪ್ಪ ಹರ್ದಾರಿ, ಪುರಣ್ಣಾ ನೀರಲಗ, ನೀಲಕಂಠ ತಡಸದಮಠ, ಶಕುಂತಲಾ ಮುಗಳಿ, ಮಂಜುಳಾ ಮೇಟಿ, ಅಕ್ಕನ ಬಳಗದ ಗೀತಾ ಮುಳ್ಳಳ್ಳಿ, ಪ್ರಮೀಳಾದೇವಿ ಪಾಟೀಲ್, ವೀರೇಶ್ ಸಂಗಳದ, ಅನಿಲ್ ಕವಿಶೆಟ್ಟಿ, ಸುರೇಶ ಹೊರಕೇರಿ, ಜಯಲಕ್ಷ್ಮಿ ಉಮಚಗಿ, ರತ್ನಾ ಗಂಗಣ್ಣವರ, ರಾಜು ಕೋರ್ಯಾನಮಠ, ನಿರ್ಮಲಾ ಹಿರೇಮಠ, ನಿರ್ಮಲ ಅಂಗಡಿ, ಶಶಿಕಲಾ ಶಾಸ್ತ್ರಿಮಠ ಇದ್ದರು.