ಹುಬ್ಬಳ್ಳಿಯ ಗಬ್ಬೂರ ಕುಂದಗೋಳ ಕ್ರಾಸ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಮತ್ತು ಸಿಸಿಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಗಳವಾರ ಬಂಧಿಸಿದ್ದಾರೆ.
ಹಾವೇರಿ ನಿವಾಸಿಗಳಾದ ಮಹಮ್ಮದ್ ಶಾಹಿದ್ ಎಲಿಗಾರ (23), ರೆಹಮಾನ್ ಬೇಗ ಸವಣೂರ (26), ನಿಸಾರ್ ಅಹ್ಮದ್ ನಾಯ್ಕನವರ (44) ಈ ಮೂವರೂ ಆರೋಪಿಗಳಿಂದ 12.64 ಲಕ್ಷ ರೂ ಮೌಲ್ಯದ 10.5 KG ಗಾಂಜಾ, 3 ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಆಟೋ ವಶಪಡಿಸಿಕೊಂಡಿದ್ದಾರೆ.
ಬೆಂಡಿಗೇರಿ ಠಾಣಾ ಪೊಲೀಸರು ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.