ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕನ್ನಡಿಗರ ಮೇಲಾದ ಹತ್ಯೆ ಖಂಡಿಸಿ, ಉಗ್ರಗಾಮಿಗಳ ಭಾವಚಿತ್ರಕ್ಕೆ ಬೆಂಕಿಹಚ್ಚುವ ಮೂಲಕ ಹುಬ್ಬಳ್ಳಿ ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಭಯೋತ್ಪಾದಕರ ದಾಳಿ ತಡೆಗೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಮಾತನಾಡಿ, ಕನ್ನಡಿಗರ ಮೇಲಾದ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಉಗ್ರಗಾಮಿಗಳ ದಾಳಿ ಮತ್ತು ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು
ಈ ವೇಳೆ ಆಟೋ ಚಾಲಕರು ಮತ್ತು ಮಾಲೀಕರು ಕನ್ನಡಿಗರನ್ನು ಕೊಂದ ಉಗ್ರಗಾಮಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು. ಭಯೋತ್ಪಾದಕರ ಅಟ್ಟಹಾಸ, ದಾಳಿಗಳಿಗೆ ಸರ್ಕಾರವು ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿ, ಉಗ್ರಗಾಮಿಗಳ ಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.