ಸಿನೆಮಾ, ದೂರದರ್ಶನ, ಮೊಬೈಲ್‌ಗಳ ಹಾವಳಿಯಿಂದ ಮತ್ತು ಆಧುನಿಕತೆಗೆ ಮಾರುಹೋಗಿ ರಂಗ ಭೂಮಿಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಪ್ರದರ್ಶನ ನೀಡಲು ನಟರು ತೊಡಗಿದ್ದರಿಂದ ವೃತ್ತಿ ರಂಗಭೂಮಿ ಜನಸಾಮಾನ್ಯರಿಂದ ದೂರಾಗುತ್ತಿದೆ ಎಂದು ಮಾಜಿ ರಂಗಾಯಣದ ನಿರ್ದೇಶಕ ಸುಭಾಷ್ ನರೇಂದ್ರ ಹೇಳಿದರು.
ಹುಬ್ಬಳ್ಳಿ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ರಂಗ ಕಲಾವಿದೆ ವೀಣಾ ಅಠವಲೆ ದತ್ತಿ ಕಾರ್ಯಕ್ರಮದಲ್ಲಿ ರಂಗಭೂಮಿಯ ಏಳು-ಬೀಳು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವೀಣಾ ಅಠವಲೆಯವರು ಕಲಾವಿದೆಯಾಗಿ, ಬಡ ಮಕ್ಕಳ ತಾಯಿಯಾಗಿ ಮಾಡಿದ ಸೇವೆ ಅಪಾರ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪದ್ಮಿನಿ ಓಕ್, ರಂಗ ಕಲಾವಿದ ಗೋಪಾಲ ಉಣಕಲ್, ನೃತ್ಯ ವಿಧುಷಿ ಹೇಮಾ ವಾಘ್ಮೋಡೆ ಅವರನ್ನು ಸನ್ಮಾನಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ | ಪ್ರಲ್ಹಾದ್ ಜೋಶಿ ಎಲ್ಲಿದ್ದಾರೆಂದು ಪತ್ತೆ ಹಚ್ಚಬೇಕಿದೆ: ವಿಜಯಕುಮಾರ ಗುಂಜಾಳ ಟೀಕೆ
ಕಾರ್ಯಕ್ರಮದಲ್ಲಿ ರಂಗ ಕಲಾವಿದ ಬಸವರಾಜ ಚಕ್ರಸಾಲಿ, ಡಾ. ಲಿಂಗರಾಜ ಅಂಗಡಿ, ಲಕ್ಷ್ಮಣ್ ರಾವ್ ಓಕ್, ಪ್ರೊ ಕೆ ಎಸ್ ಕೌಜಲಗಿ, ಪದ್ಮಿನಿ ಓಕ್, ಜೋಶನಾ ಕಡಕೋಳ, ಸುನಿಲ್ ಪತ್ರಿ, ವಿ ಎನ್ ಕೀರ್ತಿವತಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಸಿದ್ದಮ್ಮ ಅಡವೆನ್ನವರ, ಎಸ್ ಕೆ ಆದಪ್ಪನವರ, ಸಂಧ್ಯಾ ದಿಕ್ಷೀತ, ಅನಸೂಯಾ ಪಾಟೀಲ, ರೇಖಾ ಹೆಗಡೆ, ರೇಣುಕಾ ದೆಸಾಯಿ, ರೂಪಾ ಜೋಶಿ, ಈರಣ್ಣ ಕಾಡಪ್ಪನವರ, ಬ್ಯಾಸಿಲ್ ಡಿಸೋಜಾ, ಭಾರತಿ ವಾಲಿ, ನೀಲಾ ಕುಬಸದ ಹಾಗೂ ಇತರರು ಇದ್ದರು.