5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ಘಟನೆ ಹಾಗೂ ಬಿಬಾರ ಮೂಲದ ಆರೋಪಿ ರಿತೇಶಕುಮಾರ್‌ನ ಎನ್‌ಕೌಂಟರ್ ಪ್ರಕರಣದ ಹುಬ್ಬಳ್ಳಿ ಜನೆತೆಯೆ ಬೆಚ್ಚಿಬಿದ್ದಿದ್ದು, ಇತ್ತ ಮೃತ ಬಾಲಕಿ ಕುಟುಂಬಕ್ಕೆ ಹಲವರು ಸಹಾಯಕ್ಕೆ ಧಾವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆಯ ಮೂಲಕ 28500ರೂ ಚೆಕ್ ನೀಡಿ ಸಾಂತ್ವನ ಹೇಳಿ ಹೇಳಿದ್ದಾರೆ.
ಈ ವೇಳೆ ಸಂಸ್ಥೆಯ ಮಹಿಳೆಯರು ಮಾತನಾಡಿ, ಅತ್ಯಾಚಾರ ಮಾಡಿ ಪುಟ್ಟ ಐದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದ ದುರ್ಘಟನೆ ಹಬ್ಬಳಿಯ ಅಶೋಕನಗರದ ವ್ಯಾಪ್ತಿಯಲ್ಲಿ ನಡೆದದ್ದು ಕ್ಷಮಿಸಲಾರದ ಘಟನೆ. ಅತ್ಯಾಚಾರಿ ಬಿಹಾರ ಮೂಲದ ವಲಸಿಗನಾಗಿದ್ದಾನೆ. ಮೃತ ಬಾಲಕಿಯ ತಾಯಿ ಲತಾ ಕುರಿ ಮನೆ ಕೆಲಸ ಮಾಡಿಕೊಂಡು ಬದುಕಿದ್ದವಳು. ತಂದೆ ಪೆಂಟಿಂಗ್ ಮಾಡುವ ಕೂಲಿ ಕೆಲಸ ಮಾಡುತ್ತಾರೆ. ವಾಸಿಸಲು ಸ್ವಂತ ಮನೆಯು ಇಲ್ಲ. 8 ವರ್ಷದ ಹೆಣ್ಣು ಮಗು ಅಂಗವಿಕಲೆ. ಅವರ ಬದುಕ ದುಸ್ತರವಾಗಿದೆ ಎಂದರು.
ಸಿಸ್ಟರ ಸಾಲಿ ಡಿಸೋಜ 5000ರೂ, ಸಿಸ್ಟರ ದಿವ್ಯಾಡಿ’ಸೋಜ 5000ರೂ, ಪ್ರತಾಪ 3000ರೂ, ವೆನಿಟಾ ಪೇರ್ನಾಂಡಿಸ್ 5000ರೂ, ಬಿಹಾರದ ಪ್ರಕಾಶಲೂಯಿಸ 5500 ರೂ ಒಟ್ಟು 28500ರೂ. ನೀಡಿ ನೊಂದ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ವೇಳೆ ಇಸಾಬೆಲಾ ಝೇವಿಯರ್ ಇನ್ನಿತರರು ಇದ್ದರು.