ಧಾರವಾಡ ಕಸಾಪ ಜಿಲ್ಲಾ ಹಾಗೂ ಹುಬ್ಬಳ್ಳಿ ತಾಲೂಕು ಘಟಕದ ವತಿಯಿಂದ ಮಾರ್ಚ್ 10ರಂದು ಜೆಎಸ್ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಸರ್ ಸಿದ್ದಪ್ಪ ಪ್ರತಿಷ್ಠಾನದ ದತ್ತಿ ನಿಧಿಯಲ್ಲಿ ಕಂಬಳಿ-ಬದುಕು-ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯ.ರು.ಪಾಟೀಲ ಮಾತನಾಡಿ, ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು, ಡೆಪ್ಯುಟಿ ಚೆನ್ನಬಸಪ್ಪ, ಸಿರಸಂಗಿ ಲಿಂಗರಾಜರು, ವಾರದ ಮಲ್ಲಪ್ಪ ಹೀಗೆ ಮುಂತಾದ ಬೆಳಕು ಬಿತ್ತಿದವರನ್ನು ನಾವು ಮರೆಯುತ್ತಿದ್ದೇವೆ. ಸರ್ ಕಂಬಳಿಯವರ ಆದರ್ಶ ವಿದ್ಯಾರ್ಥಿಯಾಗಿ, ವಕೀಲರಾಗಿ, ರಾಜಕಾರಣಿಯಾಗಿ, ಸಚಿವರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ನಾಡಿಗೆ ಸಲ್ಲಿಸಿದ ಸೇವೆ ಅನನ್ಯ, ಅಪರೂಪ ಮತ್ತು ಅವಿಸ್ಮರಣೀಯ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಈಗಾಗಲೇ ಮುಂಡರಗಿಯಲ್ಲಿ ಸರ್ ಸಿದ್ದಪ್ಪ ಮೂರ್ತಿ ಸ್ಥಾಪನೆ ಮಾಡಿದ್ದು, ಈಗ ಲಕ್ಕುಂಡಿಯಲ್ಲಿಯೂ ಈ ಕೆಲಸ ನಡೆದಿದೆ ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಕೊಳತೆ ಸ್ಥಿತಿಯಲ್ಲಿ ಮೃತ ದೇಹ ಪತ್ತೆ ಪ್ರಕರಣ: ಆರೋಪಿಗಳಿಬ್ಬರ ಬಂಧನ
ಜೆಎಸ್ಎಸ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಎಸ್.ಕೌಜಲಗಿ ನಿರೂಪಿಸಿದರು. ಚನ್ನಬಸಪ್ಪ ಧಾರವಾಡ ವಂದಿಸಿದರು. ಲಿಂಗರಾಜ ಕಂಬಳಿ, ಶಾಂತವೀರ ಬೆಟಗೇರಿ, ಸೋಮಶೇಖರ್ ಇಟಗಿ, ಸುರೇಶ್ ಲಿಂಬಿಕಾಯಿ, ಪ್ರೊ. ದೀಪಾ ಪಾಟೀಲ ಉಪಸ್ಥಿತರಿದ್ದರು.