ಕಳ್ಳರು ಪಾದಾಚಾರಿ ಮಹಿಳೆಯ ಹತ್ತಿರವಿದ್ದ ಚಿನ್ನದ ಸರ ಮತ್ತು ₹1.20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಗರದ ಚನ್ನಪೇಟೆಯಲ್ಲಿ ಸಂಭವಿಸಿದೆ.
ಬೈಕ್ ಮೇಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ತಮ್ಮ ಹತ್ತಿರವಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ನೊಂದ ಮಹಿಳೆ ನಿರ್ಮಲಾ ಪೂಜಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.