ಕಳೆದ ಜ. 28ಕ್ಕೆ ನಡೆದ ಆಕಾಶ ಪರಶುರಾಮ ವಾಲ್ಮೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ನಡೆಸಿದ್ದ ಪೊಲೀಸರು ಮತ್ತೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವರಾಜ ನಿತ್ಯಾನಂದ ಮಿಶ್ರಿಕೋಟಿ, ರೋಹನ ರಾಜು ಬೀಳಗಿ ಹಾಗೂ ವಿನಾಯಕ ದುಂಡೇಶ್ ಕುಪ್ಪಸಗೌಡ್ರ ಈ 3 ಜನ ಆರೋಪಿಗಳು ಹುಬ್ಬಳ್ಳಿಯ ಆನಂದನಗರದ ನಿವಾಸಿಗಳು.
ಸದ್ಯ ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.