ಮಾರ್ಚ 18ರಂದು ಹುಬ್ಬಳ್ಳಿ ನಗರದಲ್ಲಿ ರಂಗ ಪಂಚಮಿ ಪ್ರಯುಕ್ತ ಬಣ್ಣ ಇರುವುದರಿಂದ ಬೆಳಿಗ್ಗೆ 6 ರಿಂದ ರಾತ್ರಿ 11 ಘಂಟೆಯವರೆಗೆ ಹುಬ್ಬಳ್ಳಿ-ಧಾರವಾಡ ಮಾರ್ಗ ಮಧ್ಯ ಬಿ.ಆರ್.ಟಿ.ಎಸ್ ಚಿಗರಿ ಬಸ್ ಕಾರ್ಯಾಚರಣೆ ಇರುವುದಿಲ್ಲ.
ಈ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಿಶ್ರಪಥದಲ್ಲಿನ ವಾ.ಕ.ರ.ಸಾ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಾನ್ ಬಿ.ಆರ್.ಟಿ.ಎಸ್ ವಾಹನಗಳಲ್ಲಿ ಬಿ.ಆರ್.ಟಿ.ಎಸ್ ಪ್ರಯಾಣಿಕರು ಮಾಸಿಕ ಪಾಸ್ ಸ್ಮಾರ್ಟ ಕಾರ್ಡ ತೋರಿಸಿ ಪ್ರಯಾಣ ಮಾಡಲು ಅನುಮತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸುವಂತೆ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.