ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯನ್ನು ವಿಂಗಡಣೆ ಮಾಡಿ, ಅಸ್ತಿಸ್ವಕ್ಕೆ ಬರುವ ನೂತನ ಜಿಲ್ಲೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಿಲ್ಲೆ ಎಂದು ನಾಮಕರಣ ಮಾಡಬೇಕೆಂದು ಕಿತ್ತೂರಿನ ರಾಣಿ ಚೆನ್ನಮ್ಮ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಗಂಗಾಧರ ದೊಡ್ಡವಾಡ ಒತ್ತಾಯಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಹಾಗೂ ವಿಜಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಚೆನ್ನಮ್ಮ ವರ್ತುಲದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
“ಆಂಗ್ಲರ ವಿರುದ್ಧ ವೀರನಾರಿ ಧ್ವನಿ ಮತ್ತು ಖಡ್ಗ ಎತ್ತಿ ದೇಶದ ಇತರ ರಾಜ ಸಂಸ್ಥಾನಗಳಿಗೆ ವೀರಾವೇಶದ ಮಾದರಿಯನ್ನು ಕೊಟ್ಟಂತ ಚೆನ್ನಮ್ಮಳನ್ನು ಆಡಳಿತದ ಪ್ರತಿ ಹಂತದಲ್ಲೂ ಸ್ಮರಿಸುವುದು ಅವಶ್ಯವಾಗಿದೆ. ಸರ್ಕಾರ ರಾಣಿ ಚನ್ನಮ್ಮನ ಸ್ಮರಣಾರ್ಥದ ಈ ಸಮಯದಲ್ಲಿ ದಿಕ್ಕುಗಳಾಗಿ ವಿಂಗಡಣೆಯಾಗಿರುವ ಜಿಲ್ಲೆಗೆ ರಾಣಿ ಚನ್ನಮ್ಮನ ಹೆಸರಿಟ್ಟು ಮುಂದಿನ ಪೀಳಿಗೆಗೆ ಚನ್ನಮ್ಮನ ಆದರ್ಶ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕಬ್ಬು ಬೆಳೆಗೆ ಹೆಚ್ಚಿದ ಬೇಡಿಕೆ; ಪೂರೈಕೆಗೆ ರೈತರ ಷರತ್ತು
ಈ ವೇಳೆ ವಿರೂಪಾಕ್ಷಪ್ಪ ಕಳ್ಳಿಮನಿ, ಈಶ್ವರ ಶಿರಸಂಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ರಾಜಶೇಖರ ಮೆಣಸಿನಕಾಯಿ, ಶಿವಾನಂದ ಮಾಯಕಾರ, ವೆಂಕನಗೌಡ ಕಂಟೆಪ್ಪಗೌಡರ, ಶಿವಾನಂದ ಬೆಂಗೇರಿ, ನವೀನ ಕುದರಿ, ಈರಪ್ಪ ಯಮ್ಮಿ, ಗುರುಸಿದ್ದಗೌಡ ದ್ಯಾವನಗೌಡರ, ರವಿರಾಜ್ ಕೊಡ್ಲಿ, ವಿಜಯ ಗುಡಿಗೇರಿ, ತಾರದೇವಿ ವಾಲಿ, ಶೇಖಣ್ಣಾ ಬೆಂಡಿಗೇರಿ, ಸಿದ್ದಪ್ಪ ಮೇಟಿ, ಸುರೇಶ ಅಸುಂಡಿ, ನಂದಕುಮಾರ ಪಾಟೀಲ, ಕುಮಾರಗೌಡ ಪಾಟೀಲ, ರವಿರಾಜ್ ಕೊಡ್ಲಿ, ಸಿದ್ದಪ್ಪ ಹಿಂದಿನಮನಿ, ಬಸವರಾಜ ತೋಟದ, ಮಹಾಂತೇಶ ಪಾಟೀಲ್, ಕಿಶೋರ್ ಶಿರಸಂಗಿ, ಅಂದಾನಪ್ಪ ಹರದಾರಿ, ಕುಮಾರ ಕುಂದನಳ್ಳಿ ಇದ್ದರು.