ಹುಬ್ಬಳ್ಳಿಯಲ್ಲಿ ಡಾ. ಭಾರತಿ ಹಿರೇಮಠ ಅವರ ತಂದೆ, ತಾಯಿ ಹೆಸರಿನಲ್ಲಿ 50.000 ರೂ. ದತ್ತಿ ನಿಧಿ ಸ್ಥಾಪನೆ ಮಾಡಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಗೆ ಡಿ.ಡಿ ನೀಡಿದರು.
ನಗರದ ಎಸ್‌ಜೆಎಮ್‌ವಿಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಜೂನ್ 3 ಅಥವಾ 21 ರಂದು ವಿದ್ಯಾರ್ಥಿಗಳಿಗೆ ಕಮ್ಮಟ ಏರ್ಪಡಿಸಲು ತಿಳಿಸಿದ್ದಾರೆ. ಪ್ರಸ್ತುತ ಧಾರವಾಡ ಜಿಲ್ಲೆಯ ದತ್ತಿಗಳ ಸಂಖ್ಯೆ 130 ರಷ್ಟಿವೆ ಎಂದು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ. ಲಿಂಗರಾಜ ಅಂಗಡಿ, ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ, ಗೌರವ ಕಾರ್ಯದರ್ಶಿ ಸಿದ್ದಮ್ಮ ಅಡವೆನ್ನವರ, ಸಂಧ್ಯಾ ದಿಕ್ಷೀತ, ಸುಜಾತ ಹೆಬ್ಬಾಳದ, ಭೀಮಣ್ಣ ಅಡೆವನ್ನವರ ಇದ್ದರು.