ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ (ಎಸ್.ಸಿ) ಮೋರ್ಚಾ ಅಧ್ಯಕ್ಷರಾಗಿ ಡಾ. ವಿಜಯ್ ಗುಂಟ್ರಾಳ ನೇಮಕಗೊಂಡಿದ್ದಾರೆ.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕಳೆದ 30 ವರ್ಷಗಳ ನಿರಂತರ ಹೋರಾಟಗಳ ಮೂಲಕ ಗುತ್ತಿಗೆ ರದ್ದುಪಡಿಸಿ 1001 ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಿಸಿದ್ದಾರೆ. ಪ್ರಸ್ತುತ 870 ಪೌರಕಾರ್ಮಿಕರ ಖಾಯಂಗೊಳಿಸಲು ಯಶಸ್ವಿ ಹೋರಾಟ ನಡೆಸಿದ್ದಾರೆ. ಕಲಘಟಗಿ, ಕುಂದಗೋಳ, ಅಣ್ಣಿಗೇರಿ ನವಲಗುಂದ, ಅಳ್ನಾವರ ಅಲ್ಲದೇ ಹಾವೇರಿ ಜಿಲ್ಲೆಯ ಬಂಕಾಪುರ, ಸವಣೂರ ಶಿಗ್ಗಾವಿ ಮುಂತಾದ ಊರುಗಳಲ್ಲಿ ಪೌರಕಾರ್ಮಿಕರು ಸಫಾಯಿ ಕರ್ಮಚಾರಿಗಳು ಶೋಷಿತ ದಮನಿತ ಧ್ವನಿ ಇಲ್ಲದ ಜನರ ಪರವಾಗಿ ಹೋರಾಟಗಳನ್ನು ನಡೆಸಿ ಹಕ್ಕುಗಳು ಸೌಲಭ್ಯಗಳನ್ನು ದೊರಕಿಸಿಕೊಟ್ಟಿದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಡಿಮ್ಹಾನ್ಸ್ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಜಾನಪದ ವಿಶ್ವವಿದ್ಯಾಲಯ, ಸರ್ಕಾರಿ ವಿಭಾಗೀಯ ಪ್ರಿಂಟಿಂಗ್ ಪ್ರೆಸ್ ತೋಟಗಾರಿಕೆ ಇಲಾಖೆ ಪಾಲಿಕೆಯ ಆಟೋ ಟಿಪ್ಪರ್ ಡ್ರೈವರ್ ಒಳಚರಂಡಿ ಕಾರ್ಮಿಕರು ವಾಹನ ಚಾಲಕರು ಮುಂತಾದ ನೂರಾರು ಇಲಾಖೆಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ, ಇಎಸ್‌ಐ, ಪಿಎಫ್ ವಿವಿಧ ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೌರಕಾರ್ಮಿಕರು ಸಫಾಯಿ ಕರ್ಮಚಾರಿಗಳಿಗೆ ಅನ್ಯಾಯವಾದಾಗ ಅವರ ಪರ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಟ್ಟಿದಾರೆ. ಅಲ್ಲದೇ ವಿವಿಧ ದಲಿತ ಸಂಘಟನೆ, ಸಂಘ ಸಂಸ್ಥೆ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಪರಿವರ್ತನಾ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹಲವರ ಸಂಕಷ್ಟಕ್ಕೆ ಆಸರೆಯಾಗಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ. ಬಿ ಕೃಷ್ಣಪ್ಪ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಹಿಂದುಳಿದ ಸಮಾಜದ ಅಭಿರುದ್ದಿ ವಿದ್ಯಾವರ್ಧಕ ಸಂಘದ ಡಾ. ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಕ್ಷರಾಗಿ ಸಹಕಾರ ಮತ್ತು ಶಿಕ್ಷಣ ರಂಗದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತಿದ್ದಾರೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಲಿಂಗಾಯತರು ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಬೇಕಿದೆ: ಗಂಗಾಧರ ದೊಡವಾಡ
ಇವರ 30 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ (ಎಸ್.ಸಿ) ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ ವಿಜಯ ಗುಂಗ್ರಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.