ಸಚಿವ ಸಂಪುಟ ವಿಸ್ತರಣೆ, ಒಬ್ಬರು ಅಧಿಕಾರಿದಲ್ಲಿರುವುದು, ಒಬ್ಬರನ್ನು ತೆಗೆದು ಹಾಕಬೇಕೆಂದು ಯಾವುದೇ ಸತ್ಯವಿಲ್ಲದೆ ನಡೆಯುವ ಅನಾವಶ್ಯಕ ಚರ್ಚೆಗಳಲ್ಲಿ ನಾನು ಭಾಗಿಯಾಗುವುದಿಲ್ಲ. ಆದು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯಾಗಿರಲಿ ಅಥವಾ ಸಚಿವರ ಅಭಿಪ್ರಾಯವಾಗಿರಲಿ, ಊಹಾಪೋಹಗಳ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಎಚ್ ಕೆ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಬ್ಬಳ್ಳಿ ನಗರದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲಿಯೇ ನಡೆಯುತ್ತೆʼ’ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿ, “ಇಂಥ ಮಾತು ಅನಾವಶ್ಯಕ. ಇದರ ಬಗ್ಗೆ ನಾನು ಉತ್ತರಿಸುವುದಿಲ್ಲ” ಎಂದರು.
“ಸಾಕಷ್ಟು ಕಠಿಣವಾದ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರದವರು ನಮಗೆ ಕೊಡಬೇಕಾದ ಅನುದಾನ ಕೊಡುತ್ತಿಲ್ಲ. ಅವರು ರಾಜ್ಯದ ಅಭಿವೃದ್ಧಿ ಕುಠಿತವಾಗಲೆಂದು ನೋಡುತ್ತಿದ್ದಾರೆ. ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಿಂದ ಬಡವರನ್ನು ಮೇಲೆತ್ತಬೇಕು, ಬಡತನವನ್ನು ನಿರ್ಮೂಲನೆ ಮಾಡಬೇಕೆಂದು ರಾಜಕೀಯ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಬಜೆಟ್ ಕುರಿತು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ: ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ
“ಈ ಬಾರಿಯ ಬಜೆಟ್ ಅತ್ಯಂತ ಮಹತ್ವದ ಬಜೆಟ್ ಆಗಿದೆ. 15 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರು ಅತ್ಯಂತ ಅಧ್ಯಯನಶೀಲವಾಗಿ, ಚಾಣಾಕ್ಷತನದಿಂದ ಹಾಗೂ ಗಟ್ಟಿನಿರ್ಣಯ ತೆಗೆದುಕೊಂಡು ರಾಜ್ಯಕ್ಕೆ ಒಳ್ಳೆಯ ಬಜೆಟ್ ಕೊಡುತ್ತಾರೆಂಬ ವಿಶ್ವಾಸವಿದೆ” ಎಂದರು.