ನೌಕರಿ ಹಾಗೂ ಖಾಲಿ ನಿವೇಶನಗಳನ್ನು ಕೊಡಿಸುವುದಾಗಿ ನಂಬಿಸಿ ಸುಮಾರು 61.25,000/- ರೂ. ವಂಚನೆ ಮಾಡಿದ್ದ ಇಬ್ಬರು ಆರೋಪಿಗಳಿಬ್ಬರನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ರಾಜೇಂದ್ರ ಶಾಂತಪ್ಪ ಕೊಕಟನೂರು ಹಾಗೂ ಕಾರ್ತಿಕ ತಂದೆ ರಾಜೇಂದ್ರ ಕೊಕಟನೂರು ಇರ್ವರೂ ಆರೋಪಿಗಳಾಗಿದ್ದು, ಇಬ್ಬರೂ ಕೂಡಿಕೊಂಡು ಒಳಸಂಚು ನಡೆಸಿ, ಮಿಥುನ ಲಕ್ಷ್ಮಣ ತೋಡಕರ ಎಂಬುವವರೊಂದಿಗೆ ಸ್ನೇಹ ಬೆಳಸಿ ಸಹಾಯ ಮಾಡುವ ರೀತಿ ನಾಟಕವಾಡಿ ತಮಗೆ ದೊಡ್ಡ ದೊಡ್ಡ ಜನರು ಪರಿಚಯವಿದ್ದಾರೆ ಎಂದು ಹೇಳಿಕೊಂಡು ನೌಕರಿ ಮತ್ತು ಖಾಲಿ ನಿವೇಶನಗಳನ್ನು ಕೊಡಿಸುವುದಾಗಿ ಸುಮಾರು 61.25,000/- ರೂ. ಹಣವನ್ನು ಇಸಿದುಕೊಂಡು ವಂಚನೆ ಮಾಡಿದ್ದ ಹಿನ್ನೆಲೆಯಲ್ಲಿ ಈ ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ವಚನಗಳು ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ: ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ.
ಹಂತ ಹಂತವಾಗಿ ಬೇರೆ ಬೇರೆ ರೂಪದಲ್ಲಿ ನಂಬಿಸಿ ಹಣ ತೆಗೆದುಕೊಂಡು ಅವರಿಗೆ ನೌಕರಿಯನ್ನೂ ಕೊಡಿಸದೇ ಹಾಗೂ ನಿವೇಶನವನ್ನೂ ನೀಡದೇ ವಂಚನೆ ಮಾಡಿದ್ದ ಕಾರಣ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.