ಹುಬ್ಬಳ್ಳಿ | ಮೋದಿ ಸರ್ಕಾರಕ್ಕೆ ಬೆಳಗಾವಿ ಸಮಾವೇಶದ ಬಗ್ಗೆ ಭಯ ಶುರುವಾಗಿದೆ: ಸುರ್ಜೇವಾಲ

Date:

Advertisements

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜ.‌ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಬೀಮ್, ಜೈ ಸಂವಿಧಾನ ಎಂಬ ಘೋಷವಾಕ್ಯದ ಸಮಾವೇಶದ ಕುರಿತು ಪೂರ್ವಿಭಾವಿ ಸಭೆ ಮತ್ತು ಪತ್ರಿಕಾಗೋಷ್ಠಿಯನ್ನು ಹುಬ್ಬಳ್ಳಿ ಕ್ಯೂಬಿಕ್ಸ ಹೊಟೇಲ್’ನಲ್ಲಿ ಹಮ್ಮಿಕೊಂಡಿದ್ದರು.

ಪೂರ್ವಭಾವಿ ಸಭೆಯಲ್ಲಿ ಮತ್ತು ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ‌ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣಧೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಅಂದು ನಡೆದಿದ್ದು ಕೇವಲ ಗಾಂಧೀಜಿಯ ಶರೀರದ ಹತ್ಯೆಯಲ್ಲ, ಅದು ಅವರ ವಿಚಾರದ ಹತ್ಯೆಯಾಗಿತ್ತು. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ನಾವು ನಿಂತರೆ; ಬಿಜೆಪಿಯವರು ದೌರ್ಜನ್ಯಪರ ನಿಲ್ಲುತ್ತಾರೆ. ಮೋದಿ ಮತ್ತು ಬಿಜೆಪಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಭಯ ಶುರುವಾಗಿದೆ. ಗೃಹಮಂತ್ರಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ.‌ ಈ ಬಗ್ಗೆ ಬಿಜೆಪಿಯಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ. ಈ ರೀತಿಯಲ್ಲಿ ನಿರಂತರವಾಗಿ ವಿರೋಧ ಪಕ್ಷದಿಂದ ಅಟ್ಯಾಕ್ ಆಗುತ್ತಲೇ ಇದೆ. ಇದನ್ನೆಲ್ಲ ತಡೆಗಟ್ಟಲು ಕಾಂಗ್ರೆಸ್ ಮುಂದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಈಗಾಗಲೇ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ ಸೇರಿದ ಎಲ್ಲ ಶಾಸಕ, ಉಸ್ತುವಾರಿ ಮಂತ್ರಿಗಳನ್ನು ಪ್ರತ್ಯೇಕ ಸಭೆ ನಡೆಸಲಾಗಿದೆ. ಅದರಂತೆ ಕಿತ್ತೂರ ಕರ್ನಾಟಕದ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ತಿಳಿಸಲಾಗಿದೆ. ಗಾಂಧಿ ಭಾರತವನ್ನು ಸ್ಮರಿಸುವ ಮತ್ತು ಇತಿಹಾಸದ ಪುಟಕ್ಕೆ ಸೇರಬೇಕಿರುವ ಕಾರ್ಯಕ್ರಮ ಇದಾಗಿದ್ದು ಜ. 21 ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣ ಆಗುತ್ತದೆ. ರಾಹುಲ್ ಗಾಂಧಿ ಉಪಸ್ಥಿತಿ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಗಾಂಧೀಜಿ ಎಲ್ಲರಿಗೂ ಬೇಕಾಗಿರುವದರಿಂದ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದೆ. ಇದು ಕೇವಲ‌ ಪಕ್ಷದ ಕಾರ್ಯಕ್ರಮವಲ್ಲ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಈ ಜಯಘೋಷದೊಂದಿದೆ ಇಡೀ ದೇಶಕ್ಕೆ ಒಳ್ಳೆಯ ಸಂದೇಶ ಸಾರುವ ಪ್ರಯತ್ನವಾಗುತ್ತಿದೆ. ಸಂವಿಧಾನ ರಕ್ಷಣೆಗೆ ಎಲ್ಲರೂ ಕೈಜೋಡಿಸೋಣ ಎಂದು ಕರೆಕೊಟ್ಟರು.

Advertisements

ಸಭೆಯ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಕೊಡುಗೆ ಮುಂಬೈ ಕರ್ನಾಟಕದಿಂದ ದೊರಕಿದೆ. ಬೆಳಗಾವಿಯು ಕರ್ನಾಟಕಕ್ಕೆ ಉತ್ತಮ‌ ಕೊಡುಗೆ ನೀಡಿದೆ.‌ ಈ ನಡೆಯಲಿರುವ ಕಾರ್ಯಕ್ರಮ ಕೇವಲ‌ ರಾಜಕೀಯ ಸಭೆಯಲ್ಲ. ಇದೊಂದು ಐತಿಹಾಸಿಕ ಸಭೆಯಾಗಿದೆ. ಗಾಂಧೀನಿಯವರ ಸಭೆಯು ಅಸ್ಪೃಶ್ಯತೆ ವಿರುದ್ದ, ಭ್ರಾತೃತ್ವ ಭಾವನೆ ಮೂಡಿಸುವ ಸಭೆಯಾಗಿತ್ತು. ಆ ನಿಟ್ಟಿನಲ್ಲಿ 2028 ನೇ ಇಸವಿಯವರೆಗೂ ನೆನಪಿರುವಂತೆ ಈ ಕಾರ್ಯಕ್ರಮ ಯಶಸ್ವಿಯಾಗಬೇಕು. ಸಿದ್ದರಾಮಯ್ಯ ಸರ್ಕಾರಕ್ಕೆ ಕೀರ್ತಿ ತರುವ ಕೆಲಸವಾಗಬೇಕು. ಇದು ರಾಷ್ಟ್ರಾಭಿಮಾನ ವ್ಯಕ್ತಪಡಿಸುವ ಕಾರ್ಯಕ್ರಮವಾಗಿದ್ದು, ಮುಂಬೈ ಕರ್ನಾಟಕದ ಅರ್ಥಾತ್ ಕಿತ್ತೂರು ಕರ್ನಾಟಕದ ಜನರೆಲ್ಲರೂ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಕರೆಕೊಟ್ಟರು.

ಈ ವರದಿ ಓದಿದ್ದೀರಾ? ಧಾರವಾಡ | ಸಂಶಿಯಲ್ಲಿ ಜೋಡಮನಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರ

ಸಭೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಎನ್ ಎಚ್ ಕೋನರೆಡ್ಡಿ, ಶಾಸಕ ಪ್ರಸಾದ್ ಅಬ್ಬಯ್ಯ, ಶಿವಲೀಲಾ ಕುಲಕರ್ಣಿ ಮತ್ತು ಗಣ್ಯರು ವೇದಿಕೆ ಮೇಲಿದ್ದರು. ಕೆಪಿಸಿಸಿ ಪದಾಧಿಕಾರಿಗಳು, ಎಐಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X